ಸಮೋಸ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಅದರಲ್ಲೂ ಸಂಜೆ ಸ್ನ್ಯಾಕ್ಸ್ ಜೊತೆ ಸಮೋಸ ಇದ್ರೆ ಸಾಕು ರಾತ್ರಿ ಊಟವೇ ಬೇಡ ಎನ್ನುತ್ತಾರೆ. ಆದರೆ ಈ ಸಮೋಸ ಸ್ಟಿಕ್ಸ್ ಬಗ್ಗೆ ಗೊತ್ತಾ? ಹೌದು, ಸಂಜೆ ಸ್ನ್ಯಾಕ್ಸ್‌ಗೆ ಸ್ಪೆಷಲ್ ಸಮೋಸ್ ಸ್ಟಿಕ್ (Samosa Sticks) ಮಾಡಿ ಸವಿಯಬಹುದು. ಅದರ ಸೂಪರ್ ಈಸಿ ರೆಸಿಪಿ ಇಲ್ಲಿದೆ
ಸಮೋಸ ಸ್ಟಿಕ್ ಮಾಡಲು ಬೇಕಾಗುವ ಪದಾರ್ಥಗಳು
2 ಆಲೂಗಡ್ಡೆ
1 ಕಪ್ ಬೇಯಿಸಿದ ಬಟಾಣಿ
1 ಈರುಳ್ಳಿ, ಸಣ್ಣಗೆ ಕತ್ತರಿಸಿದ್ದು
1 ಟೀಸ್ಪೂನ್ ಕರಿಮೆಣಸು ಪುಡಿ
1 ಹಸಿ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿಕೊಳ್ಳಿ
½ ಟೀಚಮಚ ಜೀರಿಗೆ
½ ಒಣ ಮಾವಿನ ಪುಡಿ
½ ಕಪ್ಪು ಸಾಸಿವೆ
1 ಟೀಸ್ಪೂನ್ ಗರಂ ಮಸಾಲ
1 ಚಮಚ ತಾಜಾ ಶುಂಠಿ, ತುರಿದುಕೊಳ್ಳಿ
½ ಟೀಚಮಚ ಇಂಗು
1 ಟೀಸ್ಪೂನ್ ಅರಿಶಿನ ಪುಡಿ
ಉಪ್ಪು (ರುಚಿಗೆ ತಕ್ಕಷ್ಟು)
½ ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಎಣ್ಣೆ
ಮೈದಾ ಸ್ಲರಿ
ಸಣ್ಣ ಮರದ ಚಮಚಗಳು
ಗೋಧಿ ಹಿಟ್ಟು
ಸಮೋಸ ಸ್ಟಿಕ್‌ಗಳನ್ನುಮಾಡುವ ಸುಲಭ ವಿಧಾನ
ಒಂದು ಪ್ಯಾನ್ ನಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ಸಾಸಿವೆ ಹಾಕಿ ಚೆನ್ನಾಗಿ ಬಾಡಲು ಬಿಡಿ. ಅವು ಚೆನ್ನಾಗಿ ಬಾಡಿದ ನಂತರ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಬಾಣಲೆಗೆ ಹಾಕಿ ಅವುಗಳನ್ನ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ನಂತರ ಒಂದು ಪ್ಯಾನ್‌ಗೆ ಮಸಾಲೆಗಳನ್ನು ಸೇರಿಸಿ. ಮೊದಲು ಅರಿಶಿನ ಪುಡಿ, ಒಣ ಮಾವಿನ ಪುಡಿ, ಕೊತ್ತಂಬರಿ ಪುಡಿ, ಇಂಗು ಮತ್ತು ಗರಂ ಮಸಾಲ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಪರಿಮಳ ಬರಲು ಆರಂಭಿಸಿದ ನಂತರ, ಬೇಯಿಸಿದ ಆಲೂಗೆಡ್ಡೆಯನ್ನ ಹಿಸುಕಿಕೊಳ್ಳಿ. ಆ ಆಲೂಗಡ್ಡೆ ಮತ್ತು ಬಟಾಣಿಗಳನ್ನು ಮಸಾಲೆಗಳಿಗೆ ಹಾಕಿ ಮಿಶ್ರಣ ಮಾಡಿ. ಉಪ್ಪು ಮತ್ತು ಕರಿಮೆಣಸಿನೊಂದಿಗೆ ಮಸಾಲೆ ಹಾಕಿ ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ ಇದರಿಂದ ಆಲೂಗಡ್ಡೆ ಮಿಶ್ರಣವು ಗಾಢ ಹಳದಿ ಬಣ್ಣಕ್ಕೆ ಬರುತ್ತದೆ.
ಈಗ ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನ ಇನ್ನೊಂದು 5-8 ನಿಮಿಷ ಬೇಯಿಸಿ. ಬರ್ನರ್ ಆಫ್ ಮಾಡಿ ಮತ್ತು ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ಗೋಧಿ ಹಿಟ್ಟನ್ನ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪವೇ ನೀರನ್ನ ಹಾಕುತ್ತಾ ಕಲಸಿಕೊಳ್ಳಿ. ಅದನ್ನ ಕಲಸಿ ಸುಮಾರು 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಒಂದು ಹಾಳೆಯನ್ನ ತೆಗೆದುಕೊಳ್ಳಿ. ಅದರ ಮೇಲೆ ಚಪಾತಿ ರೀತಿ ಹಿಟ್ಟನ್ನ ಲಟ್ಟಿಸಿಕೊಳ್ಳಿ. ಆ ಚಪಾತಿ ಮೇಲೆ ಆಲೂಗೆಡ್ಡೆಯ ಮಿಶ್ರಣವನ್ನ ಹಾಕಿ ಸುತ್ತಿ. ಅಥವಾ ನೀವು ಚಪಾತಿ ಹಿಟ್ಟನ್ನ ಸಣ್ಣದಾಗಿ ಉದ್ದವಾಗಿ ಮಾಡಿಕೊಂಡು ರೋಲ್ ರೀತಿ ಮಾಡಬಹುದು. ಇದನ್ನ ಕಡ್ಡಿಯ ಹಾಗೆ ಸಣ್ಣ ಮಾಡಿದರೆ ಬಹಳ ಉತ್ತಮ. ಈ ಹಿಟ್ಟು ಅಂಟಿಕೊಳ್ಳಲು ಮೈದಾ ಸ್ಲರಿ ಬಳಕೆ ಮಾಡಬಹುದು. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಸಮೋಸಾ ತುಂಡುಗಳನ್ನು ಎಚ್ಚರಿಕೆಯಿಂದ ಅದರಲ್ಲಿ ಹಾಕಿ, ಗೋಲ್ಡನ್ ಫ್ರೈ ಆಗುವ ತನಕ ಫ್ರೈ ಮಾಡಿದರೆ, ಸಮೋಸ ಸ್ಟಿಕ್ ರೆಡಿ.
ಇದನ್ನೂ ಓದಿ: ಸಂಜೆಗೆ ಸ್ಪೆಷಲ್ ಸ್ನ್ಯಾಕ್ಸ್, ಚೀಸೀ ಪನೀರ್ ಸಿಗಾರ್ ರೋಲ್ ರೆಸಿಪಿ ಇಲ್ಲಿದೆ
