Shubman Gill: ವಿಶ್ವಕಪ್‌ ತಂಡದಿಂದ ಗಿಲ್‌ ಔಟ್‌, ಕೊನೆಗೂ ಮೌನ ಮುರಿದ ಶುಭಮನ್

Shubman Gill reaction about not getting place in world cup team

ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ (Shubman Gill) ಅವರನ್ನ ಟಿ20 ವಿಶ್ವಕಪ್ (World Cup) 2026 ರ ಭಾರತ ತಂಡದಿಂದ ಹೊರಗಿಟ್ಟಿದ್ದು, ಈ ವಿಚಾರವಾಗಿ ಗಿಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಗಿಲ್‌ ಹೇಳಿದ್ದೇನು?

ನಾಳೆಯಿಂದ ನ್ಯೂಜಿಲೆಂಡ್‌ ಜೊತೆ ಏಕದಿನ ಸರಣಿ ನಡೆಯಲಿದೆ. ಈ ಹಿನ್ನಲೆಯಲ್ಲಿ ತಂಡದ ನಾಯಕರಾಗಿರುವ ಗಿಲ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಮಯದಲ್ಲಿ ಮಾಧ್ಯಮಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದು, ವಿಶ್ವಕಪ್‌ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಬಿಸಿಸಿಐ (BCCI) ಆಯ್ಕೆದಾರರು ತಮ್ಮನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಗಿಲ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ನನ್ನ ಆಯ್ಕೆದಾರರ ನಿರ್ಧಾರವನ್ನು ಗೌರವಿಸುತ್ತೇನೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಶುಭವಾಗಲಿ ಎಂದು ತಂಡಕ್ಕೆ ಹಾರೈಸಿದ್ದಾರೆ.

ಹಣೆಬರಹದಲ್ಲಿ ಬರೆದಿದ್ದನ್ನ ಕಸಿಯಲು ಆಗಲ್ಲ

ಇದಿಷ್ಟೇ ಅಲ್ಲದೇ, ನಾನು ಸದ್ಯಕ್ಕೆ ಇರಬೇಕಾದ ಜಾಗದಲ್ಲಿಯೇ ಇದ್ದೇನೆ. ಮುಖ್ಯವಾಗಿ ನನ್ನ ಹಣೆಬರಹದಲ್ಲಿ ಬರೆದಿರುವುದನ್ನು ಯಾರೂ ನನ್ನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಯಾವಾಗಲೂ ಒಬ್ಬ ಆಟಗಾರ, ದೇಶಕ್ಕಾಗಿ ಎಷ್ಟು ಮಾಡಲು ಸಾಧ್ಯವೋ ಅದನ್ನ ಮಾಡುವುದರಲ್ಲಿಯೇ ನಂಬಿಕೆ ಇಡುತ್ತಾನೆ. ನಾನು ಸಹ ಹಾಗೆಯೇ ಇರುವುದು. ಆದರೆ ಆಯ್ಕೆದಾರರು ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾಗ್ತಾರಾ ಚಾಹಲ್-ಧನಶ್ರೀ, ಏನಿದು ಹೊಸ ಸುದ್ದಿ?

Leave a Reply

Your email address will not be published. Required fields are marked *