Patrick Herminie: ದೆಹಲಿಗೆ ಸೆಷಲ್ಸ್ ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹರ್ಮಿನಿ ಭೇಟಿ

Seychelles President Dr Patrick Herminie in New Delhi

ನವದೆಹಲಿ: ಸೆಷಲ್ಸ್ ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹರ್ಮಿನಿ (Patrick Herminie), ದೆಹಲಿಗೆ ನಿನ್ನೆ ಆಗಮಿಸಿದರು.  ಈ ವೇಳೆ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಉಪಸ್ಥಿತರಿದ್ದು ಸ್ವಾಗತ ಕೋರಿದರು.  

5 ದಿನಗಳ ಪ್ರವಾಸದಲ್ಲಿರುವ ಹರ್ಮಿನಿ

ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳ ಮೂಲಕವೂ ಅವರನ್ನು ಸ್ವಾಗತ ಮಾಡಲಾಗಿದ್ದು.  5 ದಿನಗಳ ಭಾರತ ಪ್ರವಾಸದಲ್ಲಿರುವ ಡಾ. ಪ್ಯಾಟ್ರಿಕ್ ಹರ್ಮಿನಿ ಇದಕ್ಕೂ ಮುನ್ನ ಚೆನ್ನೈ ಮತ್ತು ಮುಂಬೈಗೆ ಭೇಟಿ ನೀಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೀಶೆಲ್ಸ್‌ಗೆ 175 ಮಿಲಿಯನ್ ಡಾಲರ್‌ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

ಭಾರತ-ಸೀಶೆಲ್ಸ್ ಸಂಬಂಧದ ಬಲವಾದ ಅಡಿಪಾಯ ಅಭಿವೃದ್ಧಿ ಸಹಕಾರವಾಗಿದೆ. ನಮ್ಮ ಪ್ರಯತ್ನಗಳು ಸೀಶೆಲ್ಸ್‌ನ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಆಧರಿಸಿವೆ. ಈ ದಿಕ್ಕಿನಲ್ಲಿ, ನಾವು ಇಂದು $175 ಮಿಲಿಯನ್ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

ವಿಶೇಷ ಆರ್ಥಿಕ ಪ್ಯಾಕೇಜ್ ಸಾಮಾಜಿಕ ವಸತಿ, ಇ-ಮೊಬಿಲಿಟಿ, ವೃತ್ತಿಪರ ತರಬೇತಿ, ಆರೋಗ್ಯ, ರಕ್ಷಣೆ ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ಯೋಜನೆಗಳನ್ನ ಹೊಂದಿದೆ. ಹರ್ಮಿನಿ ಭಾರತಕ್ಕೆ ಮೂರು ದಿನಗಳ ರಾಜ್ಯ ಭೇಟಿಯಲ್ಲಿದ್ದಾರೆ. ಚೆನ್ನೈ ಮತ್ತು ಮುಂಬೈನಲ್ಲಿ ಬಹು-ವಲಯ ಕಾರ್ಯಕ್ರಮಗಳ ನಂತರ ಅವರು ದೆಹಲಿಗೆ ಆಗಮಿಸಿದರು.

ಚೆನ್ನೈ ಮತ್ತು ಮುಂಬೈನಲ್ಲಿ, ಹರ್ಮಿನಿ ಆಡಳಿತ, ಕೈಗಾರಿಕೆ, ಕರಾವಳಿ ನಿರ್ವಹಣೆ ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖ ಪಾಲುದಾರರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ನ್ಯಾನೋಮೀಟರ್ ಚಿಪ್ -ವೇಫರ್ ಬಿಡುಗಡೆ ಮಾಡಿದ ಅಶ್ವಿನಿ ವೈಷ್ಣವ್

Leave a Reply

Your email address will not be published. Required fields are marked *