IESA: ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ಮಿಷನ್‌ ಸಮ್ಮಿಟ್‌ ಆರಂಭ

semi conductor IESA summit started

ಬೆಂಗಳೂರು: ನಗರದಲ್ಲಿ ಆಯೋಜಿಸಿರುವ ಭಾರತೀಯ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ಅಸೋಸಿಯೇಷನ್- IESA ವಿಷನ್‌ ಸಮ್ಮಿಟ್‌ ಇಂದಿನಿಂದ ಆರಂಭವಾಗಿದೆ.

2 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ

  ಕಾರ್ಯಾಗಾರದಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, “ಉತ್ಪನ್ನಗಳ ವಿನ್ಯಾಸದಿಂದ ತಯಾರಿಕೆವರೆಗಿನ  ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.   IESA ಅಧ್ಯಕ್ಷ ರುಚಿರ್ ದೀಕ್ಷಿತ್, ಸೆಮಿಕಂಡಕ್ಟರ್‌ ವಲಯದ ಅನ್ವೇಷಣೆಗಳು ಮತ್ತು ಸವಾಲುಗಳ ಕುರಿತು ಮಾಹಿತಿ ಹಂಚಿಕೊಳ್ಳಲು ಈ ಶೃಂಗಸಭೆ ಅತ್ಯುತ್ತಮ ವೇದಿಕೆ ಆಗಿದೆ ಎಂದರು.

ಅತ್ಯುತ್ತಮ ಬೆಳವಣಿಗೆ

  SEMI ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಮನೋಚಾ, ಭಾರತ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಬೆಳವಣಿಗೆ ಕಾಣುತ್ತಿದೆ. ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಮತ್ತಷ್ಟು ಕ್ರಿಯಾಶೀಲರಾಗಲು ಈ ಶೃಂಗಸಭೆ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು

ಇದನ್ನೂ ಓದಿ: ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌ ಅಶೋಕ್‌

Leave a Reply

Your email address will not be published. Required fields are marked *