ಜ್ಯೋತಿಷ್ಯದ ಪ್ರಕಾರ, ಯಾವುದೇ ಎರಡು ಪ್ರಮುಖ ಗ್ರಹಗಳು ಒಂದಕ್ಕೊಂದು ಏಳನೇ ಮನೆಯಲ್ಲಿ, ಅಂದರೆ ಪರಸ್ಪರ ಎದುರು ಬದುರಾಗಿ (180 ಡಿಗ್ರಿ ಕೋನದಲ್ಲಿ) ಸ್ಥಾನ ಪಡೆದಾಗ ಸಮಸಪ್ತಕ ಯೋಗ ಎನ್ನುವ ವಿಶೇಷವಾದ ಯೋಗ ಸೃಷ್ಟಿ ಆಗುತ್ತದೆ. ಈ ಯೋಗದಿಂದ ಅನೇಕ ರಾಶಿಯವರಿಗೆ ಅದೃಷ್ಟದ ಹೊಳೆ ಹರಿಯುತ್ತದೆ. ಡಿಸೆಂಬರ್ 5 ರಂದು ಈ ಸಮಸಪ್ತಕ ಯೋಗ (Samasaptaka Yoga) ಸೃಷ್ಟಿ ಆಗಿದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯ ಫಲಗಳು ಸಿಗುತ್ತದೆ ಎಂಬುದು ಇಲ್ಲಿದೆ.
ವೃಷಭ ರಾಶಿ: ನಿಮ್ಮ ಜೀವನದಲ್ಲಿ ನೀವು ಹೊಸ ಶಕ್ತಿಯನ್ನು ಅನುಭವಿಸುವಿರಿ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಸೃಜನಶೀಲತೆ ಮತ್ತು ನಿಮ್ಮನ್ನು ವ್ಯಕ್ತಪಡಿಸುವ ಸಾಮರ್ಥ್ಯದಲ್ಲಿ ಹೆಚ್ಚಳವನ್ನು ನೀವು ಅನುಭವಿಸುವಿರಿ. ಸಕಾರಾತ್ಮಕ ಶಕ್ತಿಯು ನಿಮ್ಮ ಜೀವನದಲ್ಲಿ ಹರಿಯುತ್ತದೆ, ಅದು ನಿಮ್ಮ ಸುತ್ತಮುತ್ತಲಿನವರ ಮೇಲೆ ಪ್ರಭಾವ ಬೀರುತ್ತದೆ. ಇದು ವೈಯಕ್ತಿಕ ಬೆಳವಣಿಗೆ ಮತ್ತು ನಿಮ್ಮ ಸಾಮಾಜಿಕ ಸಂಬಂಧಗಳನ್ನು ಸುಧಾರಿಸುವ ಸಮಯ.
ಕಟಕ ರಾಶಿ: ಈ ರಾಶಿಯವರಿಗೆ ವೃತ್ತಿಪರ ಜೀವನದಲ್ಲಿ ದೊಡ್ಡ ಯಶಸ್ಸು ಲಭಿಸುವ ಸಾಧ್ಯತೆ ಇದೆ. ಹೊಸ ಕೆಲಸ, ಬಡ್ತಿ ಅಥವಾ ಗೌರವ ಪ್ರಾಪ್ತಿಯಾಗಬಹುದು. ಆರ್ಥಿಕ ಮೂಲಗಳು ಬಲಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ ಕಾಣುವಿರಿ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹಿರಿಯರ ಮತ್ತು ಅಧಿಕಾರಿಗಳ ಬೆಂಬಲ ದೊರೆಯಲಿದೆ.
ಸಿಂಹ ರಾಶಿ: ಹಣಕಾಸಿನ ವಿಷಯದಲ್ಲಿ ಇದು ಉತ್ತಮ ಸಮಯ ಇದಾಗಿದೆ. ಹೂಡಿಕೆಯಿಂದ ಲಾಭ ಗಳಿಸಬಹುದು. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ದೂರ ಪ್ರಯಾಣದ ಯೋಗವಿದ್ದು, ಅದು ಲಾಭದಾಯಕವಾಗಬಹುದು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ಇದನ್ನೂ ಓದಿ:ಅಡುಗೆ ಮಾಡುವಾಗ ಈ ರೂಲ್ಸ್ ಫಾಲೋ ಮಾಡಿ ಶ್ರೀಮಂತಿಕೆ ಬರುತ್ತೆ
