Sachin Tendulkar: ಮಗನ ಮದುವೆಗೆ ಪ್ರಧಾನಿಗೆ ಆಹ್ವಾನ ನೀಡಿದ ಸಚಿನ್

Sachin Tendulkar Invites Narendra Modi To Son Arjun Wedding

ನವದೆಹಲಿ: ಭಾರತೀಯ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಮಗ ಅರ್ಜುನ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಸಚಿನ್

ಈ ವಿಚಾರವಾಗಿ ಸಚಿನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಅರ್ಜುನ್ ಮತ್ತು ಸಾನಿಯಾ ಅವರ ಮದುವೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಗೌರವ ಸಿಕ್ಕಿದೆ. ಮೋದಿ ಅವರೇ, ನಿಮ್ಮ ಆಶೀರ್ವಾದ ಮತ್ತು ಯುವ ದಂಪತಿಗಳಿಗೆ ಚಿಂತನಶೀಲ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.‌

ರಾಹುಲ್‌ ಅವರನ್ನೂ ಆಹ್ವಾನಿಸಿದ ಸಚಿನ್‌

ಇನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೂ ಸಚಿನ್ ತೆಂಡೂಲ್ಕರ್ ಆಹ್ವಾನಿಸಿದ್ದಾರೆ. ಇದರ ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿವಾಹ ಆಮಂತ್ರಣ ಪತ್ರವನ್ನೂ ನೀಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಅವರು ಈ ವರ್ಷದ ಮಾರ್ಚ್‌ನಲ್ಲಿ ಮದುವೆ ಆಗುತ್ತಿದ್ದು, ಮಾರ್ಚ್ 3 ರಂದು ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿದ್ದು, ಮಾರ್ಚ್ 5 ರಂದು ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಸಲ್ಲಿ ವಿವಾಹ ನಡೆಯಲಿದೆ.

ಇದನ್ನೂ ಓದಿ: ಹೊಟ್ಟೆಯ ಸೋಂಕಿನಿಂದ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

Leave a Reply

Your email address will not be published. Required fields are marked *