Rajeev Gowda: ರಾಜೀವ್‌ ಗೌಡ ಜೊತೆ ಮತ್ತೊಬ್ಬ ಆರೋಪಿ ಬಂಧನ, ಏನಿದು ಹೊಸ ವಿಚಾರ?

Rajeev Gowda and his friend also arrested in kerala border

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಫ್ಲೆಕ್ಸ್‌ ವಿಚಾರವಾಗಿ ಏಕವಚನ ಬಳಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ (Rajeev Gowda) ಅವರನ್ನ ಬಂಧನ ಮಾಡಲಾಗಿದ್ದು, ಅವರ ಜೊತೆ ಮತ್ತೊಬ್ಬ ಆರೋಪಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ರಾಜೀವ್‌ ಗೌಡ ಸ್ನೇಹಿತ ಅಂದರ್‌

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ವಿವಾದವನ್ನ ಸೃಷ್ಟಿ ಮಾಡಿದ್ದ ಈ ಪ್ರಕರಣದಲ್ಲಿ ಪೊಲೀಸರು ರಾಜೀವ್‌ ಗೌಡ ಅವರನ್ನ ಬಂಧನ ಮಾಡಲು ಬಹಳ ಸರ್ಕಸ್‌ ಮಾಡಿದ್ದಾರೆ. ಅಲ್ಲದೇ, ರಾಜೀವ್‌ ಗೌಡ ಅವರಿಗೆ ಪ್ರಭಾವಿ ರಾಜಕಾರಣಿ ಬೆಂಬಲ ಇದೆ ಎಂಬೆಲ್ಲಾ ಆರೋಪಗಳು ಸಹ ಕೇಳಿ ಬಂದಿದ್ದವು. ಆದರೆ ಕೊನೆಗೂ ಆರೋಪಿ ಪೊಲೀಸರ ಅತಿಥಿ ಆಗಿದ್ದು, ರಾಜೀವ್‌ ಗೌಡ ಜೊತೆ ಅವರಿಗೆ ಆಶ್ರಯ ನೀಡಿದ್ದ ಮೈಕಲ್ ಎಂಬಾತನನ್ನ ಕೂಡ ಅರೆಸ್ಟ್​ ಮಾಡಲಾಗಿದೆ.

ಯಾರಿದು ಮೈಕಲ್?‌

ಮಾಹಿತಿಗಳ ಪ್ರಕಾರ, ಈ ಮೈಕಲ್‌ ​​ ಮಂಗಳೂರು ಮೂಲದ ಉದ್ಯಮಿಯಾಗಿದ್ದು, ಇಬ್ಬರನ್ನೂ ಚಿಕ್ಕಬಳ್ಳಾಪುರ ಪೊಲೀಸರು ಕೇರಳ ಗಡಿಯಿಂದ ಬಂಧಿಸಿ ಕರೆತಂದಿದ್ದಾರೆ. ಇಂದು ಇಬ್ಬರನ್ನೂ ಕೋರ್ಟ್​ಗೆ ಹಾಜರು ಮಾಡಲಿದ್ದಾರೆ. ಅಲ್ಲದೇ, ಆರೋಪಿ ರಾಜೀವ್‌ ಗೌಡ ಅವರನ್ನ ಪೊಲೀಸ್‌ ಕಸ್ಟಡಿಗೆ ಸಹ ಕೇಳಲು ನಿರ್ಧಾರ ಮಾಡಲಾಗಿದ್ದು, ಆದರೆ ಮೈಕಲ್ ಅವರನ್ನ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ. ಆರೋಪಿಗೆ ಆಶ್ರಯ ಕೊಟ್ಟ ಆರೋಪದಲ್ಲಿ ಮೈಕಲ್ ಅವರನ್ನ ಬಂಧನ ಮಾಡಿರುವುದರಿಂದ ಕಸ್ಟಡಿಗೆ ಕೇಳಲಾಗುವುದಿಲ್ಲ.

ಏನಿದು ರಾಜೀವ್‌ ಗೌಡ ಪ್ರಕರಣ?

ರಸ್ತೆ ಮಧ್ಯದಲ್ಲಿ ಅಕ್ರಮವಾಗಿ ಬ್ಯಾನರ್‌ ಹಾಕಿದ್ದನ್ನ ಪೌರಾಡಳಿತ ತೆರವು ಮಾಡಿತ್ತು. ಈ ವಿಚಾರವಾಗಿ ಆಕ್ರೋಶಗೊಂಡ ರಾಜೀವ್‌ ಗೌಡ ಜನವರಿ 12ರಂದು ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರ. ಈ ವಿಚಾರವಾಗಿ ಅಮೃತಾ ಗೌಡ ಅವರು ಜನವರಿ 14ರಂದು ಅಧಿಕೃತ ದೂರು ದಾಖಲು ಮಾಡಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: ಇಂದೂ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಕಡಿಮೆ ಆಗುತ್ತಾ ಚಳಿ?

Leave a Reply

Your email address will not be published. Required fields are marked *