Bank Job: 53 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು ಈಗ್ಲೇ ಅಪ್ಲೈ ಮಾಡಿ

Raichur Koppala Cooperative Bank job apply for 53 posts

ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (Raichur Koppala Cooperative Bank) ಈ ಬಾರಿ 53 ಖಾಯಂ ಹುದ್ದೆಗಳಿಗೆ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜೂನಿಯರ್ ಕ್ಲರ್ಕ್-1, ಸಹಾಯಕ ಸಿಬ್ಬಂದಿ ಸೇರಿದಂತೆ ಅನೇಕ ಹುದ್ದೆಗಳಿಗೆ (Bank Job) ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಒಟ್ಟು ಹುದ್ದೆಗಳು: 53

ಜೂನಿಯರ್ ಕ್ಲರ್ಕ್-1 : 11 ಹುದ್ದೆಗಳು

ಸಹಾಯಕ ಸಿಬ್ಬಂದಿ ಗ್ರೇಡ್-1 : 34 ಹುದ್ದೆಗಳು

ಅಟೆಂಡರ್ : 8 ಹುದ್ದೆಗಳು

ವಿದ್ಯಾರ್ಹತೆ

ಜೂನಿಯರ್ ಕ್ಲರ್ಕ್-1 ಮತ್ತು ಸಹಾಯಕ ಸಿಬ್ಬಂದಿ ಗ್ರೇಡ್-1 ಹುದ್ದೆಗಳಿಗೆ ಯಾವುದೇ ಪದವಿ ಮುಗಿಸಿರಬೇಕು

ಅಟೆಂಡರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕೆ ಸಮಾನಾದ ವಿದ್ಯಾರ್ಹತೆ

ಮುಖ್ಯವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಅತ್ಯಗತ್ಯ.

ವಯೋಮಿತಿ:

21ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

ವಯೋಮಿತಿ ಸಡಿಲಿಕೆ ಎಷ್ಟಿದೆ?

SC/ST/Cat-1 ಅಭ್ಯರ್ಥಿಗಳಿಗೆ 5 ವರ್ಷ, OBCಗೆ 3 ವರ್ಷ, ಅಂಗವಿಕಲರಿಗೆ 10 ವರ್ಷ ಸಡಿಲಿಕೆ ಇದೆ. ಹೈದರಾಬಾದ್-ಕರ್ನಾಟಕ ಪ್ರದೇಶದ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಸಡಿಲಿಕೆ ಇರಲಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ : 21 ನವೆಂಬರ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22 ಡಿಸೆಂಬರ್ ರಾತ್ರಿ 5.30 ಗಂಟೆವರೆಗೆ

ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 22 ಡಿಸೆಂಬರ್

ಪರೀಕ್ಷೆ ತಾತ್ಕಾಲಿಕ ದಿನಾಂಕ : ಜನವರಿ ಅಥವಾ ಫೆಬ್ರವರಿ 2026

ಅರ್ಜಿ ಶುಲ್ಕ:

ಸಾಮಾನ್ಯ, 2A, 2B, 3A, 3B ವರ್ಗಗಳಿಗೆ : 1000 ರೂಪಾಯಿಗಳು

SC/ST/Cat-1 ಮತ್ತು ಅಂಗವಿಕಲರು : 800 ರೂಪಾಯಿಗಳು

ಎಲ್ಲಾ ವರ್ಗದ ಮಾಜಿ ಸೈನಿಕರಿಗೆ 50 ರೂ ಇಳಿಕೆ ಸೌಲಭ್ಯ ಇದೆ. ಶುಲ್ಕ ಆನ್‌ಲೈನ್ ಮೂಲಕ ಮಾತ್ರ ಪಾವತಿ ಮಾಡಬೇಕು

ವೇತನ ಹೇಗಿರಲಿದೆ?

ಜೂನಿಯರ್ ಕ್ಲರ್ಕ್-1 ಹುದ್ದೆಗೆ: 61,300 ರಿಂದ 1,12,900 ವರೆಗೆ

ಸಹಾಯಕ ಸಿಬ್ಬಂದಿ ಗ್ರೇಡ್-1 : 44,425 ರಿಂದ 74,200 ವರೆಗೆ

ಅಟೆಂಡರ್ : 37,500 ರಿಂದ 76,100 ವರೆಗೆಗೆ

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನ ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಅದಕ್ಕೆ ಅಧಿಕೃತ ವೆಬ್‌ಸೈಟ್ https://tascguru.com/raichur-dcc-bank/ ಗೆ ಭೇಟಿ ನೀಡಿ ರಿಜಿಸ್ಟರ್ ಆಗಿ, ಫಾರ್ಮ್ ಭರ್ತಿ ಮಾಡಿ, ಅಗತ್ಯ ಮಾಹಿತಿಗಳನ್ನ ಕೊಡಬೇಕು.

ಇದನ್ನೂ ಓದಿ: ಕೆಲಸ ಹುಡುಕುತ್ತಿರುವವರಿಗೆ ಗುಡ್‌ನ್ಯೂಸ್‌, 35 ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *