Bad Time: ಮುಂದಿನ ತಿಂಗಳು ಕೇತು-ಚಂದ್ರ ಯುತಿ, ಈ ರಾಶಿಯವರಿಗೆ ಬರೀ ಸಂಕಷ್ಟ

rahu and moon conjunction bad time for these zodiac sign people

 ಜ್ಯೋತಿಷ್ಯದಲ್ಲಿ ರಾಹು(Rahu) ಮತ್ತು ಕೇತುಗಳನ್ನು(Ketu) ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಕಾರಣದಿಂದ ಅನೇಕ ಬಾರೀ ಸಮಸ್ಯೆಗಳೇ ಆಗುತ್ತದೆ. ಇದು ಜಾತಕದಲ್ಲಿ ಯಾವ ಮನೆಯಲ್ಲಿದೆ ಎನ್ನುವುದರ ಅನುಸಾರ ಅದರ ಪರಿಣಾಮ ನಿರ್ಧಾರ ಆಗುತ್ತದೆ. ಅಲ್ಲದೇ, ಅದರ ಕಾರಣದಿಂದ ಜೀವನದಲ್ಲಿ ಬರೀ ಕಷ್ಟಗಳು ಬರುತ್ತದೆ. ಇದೀಗ ಫೆಬ್ರವರಿ ತಿಂಗಳಿನಲ್ಲಿ ಕೇತು ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾಗುತ್ತಿದೆ. ಇದರಿಂದ ಗ್ರಹಣ ದೋಷ ಉಂಟಾಗುತ್ತದೆ. ಈ ಅಶುಭ ಸಂಯೋಗದಿಂದ ಕೆಲ ರಾಶಿಯವರ ಜೀವನದಲ್ಲಿ ಬರೀ ಸಂಕಷ್ಟ ಎದುರಾಗುತ್ತದೆ. ಹಾಗಾದ್ರೆ ಕೇತು-ಚಂದ್ರನ ಯುತಿಯಿಂದ ಯಾವ ರಾಶಿಯವರಿಗೆ ಕಷ್ಟಗಳು (Bad Time) ಬರಲಿದೆ ಎನ್ನುವುದು ಇಲ್ಲಿದೆ.

ಮಿಥುನ ರಾಶಿ: ಈ ರಾಶಿಯವರಿಗೆ ಸಹ ಗ್ರಹಗಳ ಕಾರಣದಿಂದ ತೊಂದರೆಗಳಾಗುತ್ತದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಕಷ್ಟಗಳನ್ನ ಅನುಭವಿಸುತ್ತೀರಿ. ನೀವು ನಂಬಿದವರು ನಿಮಗೆ ಮೋಸ ಮಾಡುತ್ತಾರೆ. ಈ ಸಮಯದಲ್ಲಿ ನಿಮಗೆ ಅನೇಕ ರೀತಿಯಲ್ಲಿ ಒತ್ತಡಗಳಾಗುತ್ತದೆ. ಅಲ್ಲದೇ, ನಿಮ್ಮ ಪ್ರೀತಿಯ ಜೀವನದಲ್ಲಿ ಸಹ ತೊಂದರೆ ಬರುತ್ತದೆ. ಮನೆಯವರ ವಿರೋಧ ಎದುರಾಗುವ ಸಾಧ್ಯತೆ ಇದೆ. ಆರೋಗ್ಯ ಸಹ ಈ ಸಮಯದಲ್ಲಿ ಕೈ ಕೊಡಬಹುದು.

ಕನ್ಯಾ ರಾಶಿ: ನಿಮಗೆ ಮಾನಸಿಕವಾಗಿ ಹಿಂಸೆ ಆಗುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ನೀವು ಸೋಮಾರಿಗಳಾಗುವ ಸಾಧ್ಯತೆ ಇದೆ. ಸೋಮಾರಿ ತನ ಬಿಟ್ಟರೆ ಒಳ್ಳೆಯದು. ಇದರ ಜೊತೆಗೆ ವೃತ್ತಿಜೀವನದ ಏರಿಳಿತಗಳು ಉಂಟಾಗುತ್ತದೆ. ನಿಜಕ್ಕೂ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಒಟ್ಟಾರೆ ಈ ಸಮಯ ನಿಮಗೆ ಅನುಕೂಲಕರವಾಗಿರುವುದಿಲ್ಲ. ಕುಟುಂಬದಲ್ಲಿ ಸಹ ಸಮಸ್ಯೆಗಳಾಗುತ್ತದೆ.

ವೃಶ್ಚಿಕ ರಾಶಿ:  ನೀವು ಹಣದ ಕೊರತೆಯನ್ನ ಅನುಭವಿಸಬಹುದು. ಮುಖ್ಯವಾಗಿ ಈ ಸಮಯದಲ್ಲಿ ಖರ್ಚು ಹೆಚ್ಚಾಗುತ್ತದೆ. ರಾಹು ಹಾಗೂ ಕೇತುವಿನ ಕಾರಣದಿಂದ ನಿಮ್ಮ ಆರೋಗಯ ಸಹ ಕೈ ಕೊಡುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನೀವು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಬಹುದು. ನಿಮಗೆ ಈ ಅವಧಿಯಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಹೆಚ್ಚಿನ ಕೋಪ ಬರುವ ಸಂಭವವಿದೆ. ಈ ಅವಧಿಯಲ್ಲಿ ನಿಮ್ಮ ಧೈರ್ಯ ಕಡಿಮೆಯಾಗಬಹುದು. ಈ ರಾಶಿಗೆ ಸೇರಿದ ಜನರು ತಮ್ಮ ಅನಾವಶ್ಯಕ ಖರ್ಚುಗಳನ್ನು ನಿಯಂತ್ರಣ ಮಾಡದೇ ಇರುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಮೀನ ರಾಶಿ: ನಿಮ್ಮ ಕೆಲಸಗಳಲ್ಲಿ ಅಡೆತಡೆ ಉಂಟಾಗಬಹುದು ಮತ್ತು ನೀವು ಬಡ್ತಿಯನ್ನು ಪಡೆಯುವುದರಲ್ಲಿ ಸಮಸ್ಯೆ ಎದುರಾಗಬಹುದು. ಈ ಸಮಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಶುರು ಮಾಡದೆ ಇರುವುದು ಉತ್ತಮ. ನಿಮ್ಮ ವ್ಯಾಪಾರವು ಕಡಿಮೆಯಾಗುವ ಸಾಧ್ಯತೆ ಇದೆ. ಮನೆಯ ಸದಸ್ಯರೊಂದಿಗೆ ಜಗಳವಾಗುವ ಸಾಧ್ಯತೆಯೂ ಇದೆ. ಸಂಗಾತಿಯೊಂದಿಗೆ ಜಗಳ ಅಥವಾ ಮನಸ್ತಾಪ ಉಂಟಾಗಬಹುದು. ಪ್ರೀತಿಯಲ್ಲಿರುವ ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದದೆ ಇರಬಹುದು.

ಇದನ್ನೂ ಓದಿ: ಫೆಬ್ರವರಿಯಲ್ಲಿ ದಶಾಂಕ ಯೋಗ, ಈ ರಾಶಿಯವರು ಶ್ರೀಮಂತರಾಗೋದು ಫಿಕ್ಸ್

Leave a Reply

Your email address will not be published. Required fields are marked *