ಬೆಂಗಳೂರು: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ (RB Timmapura) ಹಾಗೂ ಪುತ್ರನ ಮೇಲೆ ಅಕ್ರಮ ಆರೋಪ ಕೇಳಿಬಂದಿದ್ದು, ತಂದೆ ಮಗನಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ.
ಅಧಿಕಾರಿಗಳ ಜೊತೆ ಸೇರಿ ಅಕ್ರಮ
ಮಾಹಿತಿಗಳ ಪ್ರಕಾರ, ಅಧಿಕಾರಿಗಳ ಜೊತೆಗೆ ಸೇರಿ ಅಕ್ರಮ ಮಾಡಿರುವ ಆರೋಪ ಕೇಳಿಬಂದಿದ್ದು, ಸಚಿವ ತಿಮ್ಮಾಪುರ ಮತ್ತು ಪುತ್ರನಿಗೆ, ಅಧಿಕಾರಿಗಳ ಆಡಿಯೋ ಸಂಕಷ್ಟ ತಂದಿದೆ. ಸಿಎಲ್-7 ಸನ್ನದು ಮಂಜೂರು ಮಾಡುವ ಕುರಿತ ಆಡಿಯೋ ಒಂದು ವೈರಲ್ ಆಗುತ್ತಿದ್ದು, ಆಡಿಯೋದಲ್ಲಿನ ಸಂಭಾಷಣೆಯಲ್ಲಿ ತಿಮ್ಮಾಪುರ ಪುತ್ರರ ಹೆಸರು ಬಳಕೆ ಮಾಡಲಾಗಿದೆ.
ಮಂಜೂರು ಮಾಡಲು ಹಣದ ಬೇಡಿಕೆ
ಈ ಆಡಿಯೋದಲ್ಲಿ ಸಚಿವರ ಮೇಲೆ ಅನೇಕ ಆರೋಪಗಳನ್ನ ಮಾಡಲಾಗಿದ್ದು, ಅಬಕಾರಿ ಸನ್ನದು ಮಂಜೂರು ಮಾಡಲು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದ್ದು, ಜೊತೆಗೆ ಸಚಿವ ತಿಮ್ಮಾಪುರ ಪುತ್ರನಿಗೆ ಕರೆ ಮಾಡುವಂತೆ ಮಾತುಕತೆ ಮಾಡಲಾಗಿದೆ.
ಹಣಕ್ಕೆ ಬೇಡಿಕೆ ಇಟ್ಟ ಆಡಿಯೋ ಆಧರಿಸಿ ಜೆಡಿಎಸ್ ಶಾಸಕ ಹೆಚ್ ಟಿ ಮಂಜು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದು, ಜೊತೆಗೆ ಸಿಎಸ್‌ಗೆ ಸಹ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸಿಎಸ್ ಶಾಲಿನಿ ರಜನೀಶ್ ಅವರು ಪರಿಶೀಲನೆ ನಡೆಸಲು ಆದೇಶ ನೀಡಿದ್ದು, ಅಬಕಾರಿ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿ ವಿಡಿಯೋ ಪ್ರಕರಣ, ಅಕ್ಷಮ್ಯ ಅಪರಾಧ ಎಂದ ಶಾಸಕ ಸುರೇಶ್ ಕುಮಾರ್
