G Parameshwar: ಪೊಲೀಸ್ ಇಲಾಖೆ ಖಾಲಿ ಹುದ್ದೆಗಳ ಶೀಘ್ರ ಭರ್ತಿ: ಜಿ ಪರಮೇಶ್ವರ್‌

Police department post will be filled soon says G Parameshwar

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

900 ಹುದ್ದೆಗೆ ನೇಮಕ

ವಿಧಾನಸಭೆಯಲ್ಲಿಂದು ಸದಸ್ಯ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಳೆ ಒಂದು ವರ್ಷದಲ್ಲಿ  900 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ನೇಮಕ ಮಾಡಲಾಗಿದೆ.  ಹತ್ತು ಸಾವಿರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 33 ಪೊಲೀಸ್‌ ಠಾಣೆ

ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ 33 ಪೊಲೀಸ್ ಠಾಣೆಗಳಿದ್ದು. ತೀರ್ಥಹಳ್ಳಿಯಲ್ಲಿ ಆರು ಪೊಲೀಸ್ ಠಾಣೆಗಳಿವೆ. ಶಿವಮೊಗ್ಗ ನಗರದಲ್ಲಿ 30 ಸಾವಿರದ 104, ತೀರ್ಥಹಳ್ಳಿಯಲ್ಲಿ ಮೂರು ಸಾವಿರ ಸಿಸಿ ಟಿವಿ ಕ್ಯಾಮರಾಗಳಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಿ ಕೆಲಸದ ಕನಸಿದೆಯಾ? ಇಲ್ಲಿದೆ ನೋಡಿ ಅವಕಾಶ

Leave a Reply

Your email address will not be published. Required fields are marked *