Pariksha Pe Charcha: ದಾಖಲೆ ಬರೆದ ಪರೀಕ್ಷಾ ಪೆ ಚರ್ಚಾ, 6.76 ಕೋಟಿಗೂ ಹೆಚ್ಚು ಜನರು ಭಾಗಿ

Pariksha Pe Charcha makes record

ನವದೆಹಲಿ: ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಪರೀಕ್ಷೆಯ ಭಯದಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿವರ್ಷ ನಡೆಸುತ್ತಿರುವ  ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha) ಕಾರ್ಯಕ್ರಮ  ಹೊಸ ಮೈಲಿಗಲ್ಲನ್ನು ತಲುಪಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ 6.76 ಕೋಟಿಗೂ

6.76 ಕೋಟಿಗೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದಾರೆ.  ಈ ಕಾರ್ಯಕ್ರಮವು ಜಾಗತಿಕ ಮಟ್ಟಕ್ಕೆ ಬೆಳೆದು ಗಿನ್ನೆಸ್ ದಾಖಲೆಯನ್ನೂ ಮಾಡಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮತ್ತು ಒತ್ತಡ ನಿಭಾಯಿಸಲು ಪ್ರೇರಣೆ ನೀಡುವುದು ಇದರ ಮುಖ್ಯ ಗುರಿಯಾಗಿದೆ. ಈ ವರ್ಷ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯಲ್ಲಿ ಮಾತ್ರವಲ್ಲದೆ ಕೊಯಮತ್ತೂರು, ತಮಿಳುನಾಡು, ರಾಯ್‌ಪುರ, ಛತ್ತೀಸ್‌ಗಢ, ಗುಜರಾತ್‌ನ ದೇವ್ ಮೋಗ್ರಾ ಮತ್ತು ಅಸ್ಸಾಂನ ಗುವಾಹಟಿಯಲ್ಲಿಯೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ದಾಖಲೆ ಬರೆದ ಪರೀಕ್ಷಾ ಪೆ ಚರ್ಚಾ

ಈ ಯೋಜನೆಯು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯ ಭಾರತದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿತು, ಇದು ಕಾರ್ಯಕ್ರಮದ ಅಖಿಲ ಭಾರತ ವ್ಯಾಪ್ತಿಯನ್ನು ಪ್ರದರ್ಶಿಸಿತು.  ಈ ವರ್ಷದ ಕಾರ್ಯಕ್ರಮದಲ್ಲಿ 4.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ.  2.26 ಕೋಟಿ ಜನರು ಇದರ ತಯಾರಿಯಲ್ಲಿ ಹಾಗೂ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.  2018ರಲ್ಲಿ ಕೇವಲ 22 ಸಾವಿರ ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾರ್ಯಕ್ರಮವು, ಇಂದು ಕೋಟಿಗಟ್ಟಲೆ ಜನರನ್ನು ತಲುಪುವ ಮೂಲಕ ಜನಾಂದೋಲನ ಆಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯೊಂದಿಗೆ ಪರೀಕ್ಷೆಯನ್ನು ಎದುರಿಸುವಂತೆ ಮಾಡುವಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿದ ಯುರೋಪಿಯನ್‌ ನಾಯಕರು

Leave a Reply

Your email address will not be published. Required fields are marked *