Neha Kakkar: ಬ್ರೇಕ್ ಘೋಷಣೆ ಮಾಡಿದ ಗಾಯಕಿ ನೇಹಾ ಕಕ್ಕರ್
ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ (Neha Kakkar) ಇತ್ತೀಚೆಗೆ ಎಲ್ಲದರಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವದಂತಿಗಳಿಗೆ ಕಾರಣವಾದ ನೇಹಾ ಪೋಸ್ಟ್ ಗಾಯಕಿ ನೇಹಾ ನಿನ್ನೆ ಸೋಷಿಯಲ್ ಪೋಸ್ಟ್ ಮಾಡುವ ಮೂಲಕ ಕೆಲ ದಿನಗಳ ಕಾಲ ನಾನು ಸಂಬಂಧ, ಗಾಯನ ಹಾಗೂ ಎಲ್ಲದರಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಅವರ ಈ ಹೇಳಿಕೆಯ ಕಾರಣದಿಂದ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು. ಅವರು ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್…
