Ajit Pawar: ಭೀಕರ ವಿಮಾನ ಅಪಘಾತ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ
ಮಹಾರಾಷ್ಟ್ರ:ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ಆಗುವ ಪತನಗೊಂಡಿತ್ತು. ಈ ಭೀಕರ ಅಪಘಾತದಲ್ಲಿ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ . ಚಾರ್ಟರ್ಡ್ ವಿಮಾನ ಪತನ ಅಪಘಾತದ ಸ್ಥಳದಲ್ಲಿ ಹರಡಿಕೊಂಡಿರುವ ಅವಶೇಷಗಳು ಈ ಅಪಘಾತದ ಭೀಕರತೆಗೆ ಸಾಕ್ಷಿ ಆಗಿದ್ದು, ವಿಮಾನದಿಂದ ಜ್ವಾಲೆ ಮತ್ತು ದಟ್ಟ ಹೊಗೆ ಹೊರಬರುತ್ತಿದೆ. ಪವಾರ್ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಅದರಲ್ಲಿ ಪವಾರ್ ಅವರ ಜೊತೆಗೆ ಇತರ ನಾಲ್ವರು ಪ್ರಯಾಣಿಕರಿದ್ದರು….
