NIRMALA SITHARAMAN: ದೇಶದಲ್ಲಿ ಹೆಚ್ಚಾದ ತೆರಿಗೆ ಕಟ್ಟುವವರ ಸಂಖ್ಯೆ

nirmala sitharaman talks about increasing in tax payers

ನವದೆಹಲಿ; ಕಳೆದ  ದಶಕದಲ್ಲಿ ದೇಶದಲ್ಲಿ ಸ್ವಯಂಪ್ರೇರಿತ ತೆರಿಗೆ ಅನುಸರಣೆ ಗಮನಾರ್ಹವಾಗಿ ಏರಿಕೆ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹೇಳಿದ್ದಾರೆ.

ತೆರಿಗೆ ವಂಚನೆಯನ್ನ ನಿಭಾಯಿಸಲಾಗುತ್ತಿದೆ
ದೆಹಲಿಯಲ್ಲಿ ಇಂದು 18 ನೇ ಜಾಗತಿಕ ವೇದಿಕೆಯ ಸಮಗ್ರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆರಿಗೆ ವಂಚನೆಯನ್ನು ದೃಢವಾಗಿ ನಿಭಾಯಿಸಲಾಗುತ್ತಿದೆ.  ತೆರಿಗೆ ವಿಷಯಗಳಲ್ಲಿ  ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ, ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲಗಲದೇ, ಈ ಕ್ರಮಗಳ ಕಾರಣದಿಂದ ಆಡಳಿತದಲ್ಲಿ ಸುಧಾರಣೆಗಳನ್ನು ಸಾಧಿಸಲಾಗುತ್ತಿದೆ.  ದೇಶ, ಆರ್ಥಿಕ ಆಡಳಿತದ ಮೇಲೆ ಅವಲಂಬಿತವಾಗಿದೆ.  ಅದು ನ್ಯಾಯಸಮ್ಮತತೆ ಮತ್ತು ಜವಾಬ್ದಾರಿಯ ಮೇಲೆ ನಿಂತಿರಬೇಕು ಎಂದಿದ್ದಾರೆ. ಕಾನೂನುಬದ್ಧ ತೆರಿಗೆಯಿಂದ ತಪ್ಪಿಸಿಕೊಂಡಾಗ, ಅದು ಆದಾಯದ ಅಂತರವನ್ನು ಮಾತ್ರವಲ್ಲದೆ, ಅಭಿವೃದ್ಧಿಯ ಅಂತರವನ್ನೂ ಸೃಷ್ಟಿಸುತ್ತದೆ. ಆದ್ದರಿಂದ ಅಭಿವೃದ್ಧಿಯ ಹಾದಿಯಲ್ಲಿ, ಪಾರದರ್ಶಕತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆದಾರರ ವಿಶ್ವಾಸಗಳಿಸಲು ಪ್ರಯತ್ನ

ಯಾವಾಗಲೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಕೇವಲ ಒಂದು  ಸಾಧನವಾಗಿ ನೋಡದೆ, ಸುಸ್ಥಿರ ಅಭಿವೃದ್ಧಿ ಮತ್ತು ಹಣಕಾಸಿನ ಸ್ಥಿತಿಸ್ಥಾಪಕತ್ವಕ್ಕೆ ಅಡಿಪಾಯವಾಗಿ ನೋಡುವುದು ಮುಖ್ಯ ಎಂದಿಎಉವ ಅವರು, ತೆರಿಗೆ ನೀತಿಯಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ.  ಹೆಚ್ಚಿನ ಸ್ಪಷ್ಟತೆ, ಕಾರ್ಯವಿಧಾನಗಳ ಸರಳಗೊಳಿಸಲಾಗಿದೆ ಮತ್ತು ತೆರಿಗೆದಾರರೊಂದಿಗೆ ವಿಶ್ವಾಸವನ್ನು ಬೆಳೆಸಲು, ಅನೇಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಮಾಹಿತಿ ಹಂಚಿಕೆಯನ್ನು ಸುಧಾರಿಸಲು ದೇಶಗಳು ಒಟ್ಟಾಗಿ ಕೆಲಸ ಮಾಡುವಾಗ ಗೌಪ್ಯತೆ ಮತ್ತು ಸೈಬರ್ ಭದ್ರತೆಯನ್ನು ಹೆಚ್ಚಿನ ಕಾಳಜಿಯಿಂದ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದೂ  ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್‌ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌, ಸಿಎಂ ಪೋಸ್ಟ್‌ ಸೇಫ್‌?

Leave a Reply

Your email address will not be published. Required fields are marked *