T20 World Cup: ವಿಶ್ವಕಪ್‌ನಿಂದ ಔಟ್‌ ಆದ ನೇಪಾಳ, ಮೂರು ಸೋಲಿನಿಂದ ಮನೆಗೆ

Nepal eliminated after third defeat in T20 World Cup

ಕೊಲಂಬೋ: ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ (T20 World Cup) ನೇಪಾಳ ತಂಡವು ಗ್ರೂಪ್ ಸಿ ನಲ್ಲಿ ಸತತ ಮೂರನೇ ಸೋಲು ಅನುಭವಿಸುವ ಮೂಲಕ ಸೂಪರ್ ಎಂಟಕ್ಕೆ ತಲುಪುವ ಆಸೆಯನ್ನು ಕಳೆದುಕೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧ ಸೋತ ನೇಪಾಳ

ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೇಪಾಳ ಒಂಬತ್ತು ವಿಕೆಟ್‌ಗಳಿಂದ ಸೋತ ನಂತರ ಆಟದಿಂದ ಹೊರಕ್ಕೆ ಬಂದಿದೆ. ಪಂದ್ಯಗಳಿಂದ ಮೂರು ಸೋಲುಗಳನ್ನು ಅನುಭವಿಸಿರುವ ನೇಪಾಳ, ಸ್ಕಾಟ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತಕ್ಕೆ ಮುಂದಕ್ಕೆ ಹೋಗಲು ಸಾಧ್ಯವಿಲ್ಲ.

ಇದಕ್ಕೂ ಮೊದಲು ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ನೇಪಾಳ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕು ರನ್‌ಗಳ ಸೋಲು ಅನುಭವಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ಇಟಲಿ ವಿರುದ್ಧ ಹತ್ತು ವಿಕೆಟ್‌ಗಳಿಂದ ಸೋತಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಸೋಲಿನಿಂದಾಗಿ ನೇಪಾಳ ಟೂರ್ನಿಯಿಂದ ಹೊರನಡೆದಿದೆ.

ಕಳಪೆ ಆಟ ಆಡಿದ ನೇಪಾಳ

ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಟಿಂಗ್ ಮಾಡುವಲ್ಲಿ ನೇಪಾಳ ವಿಫಲವಾಗಿದ್ದು, 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 133 ರನ್ ಗಳಿಸಿತು. ಆರಂಭಿಕ ಓವರ್‌ನಲ್ಲಿ ಕುಶಾಲ್ ಭುರ್ಟೆಲ್ ಅಕೇಲ್ ಹೊಸೇನ್‌ಗೆ ಒಂದು ವಿಕೆಟ್ ನೀಡುವುದರೊಂದಿಗೆ ಇನ್ನಿಂಗ್ಸ್ ಕಳಪೆ ಆಟವನ್ನ ಪ್ರಾರಂಭ ಮಾಡಿತ್ತು. ಇದರ ನಂತರ ರೋಹಿತ್ ಪೌಡೆಲ್ ಮತ್ತು ಆಸಿಫ್ ಶೇಖ್ ಶೀಘ್ರದಲ್ಲೇ ಔಟ್‌ ಆಗಿ ಮರಳಿದ್ದಾರೆ.

12ನೇ ಓವರ್‌ನಲ್ಲಿ 100 ರನ್ ದಾಟಿದ ವೆಸ್ಟ್ ಇಂಡೀಸ್ ತಂಡ, 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 134 ರನ್ ಗಳಿಸಿ ಗುರಿ ತಲುಪಿ, ಪ್ರಬಲ ಗೆಲುವು ಸಾಧಿಸಿ ಸೂಪರ್ ಎಂಟಕ್ಕೆ ಅರ್ಹತೆ ಪಡೆಯಿತು.

ಇದನ್ನೂ ಓದಿ: ಹ್ಯಾಂಡ್‌ಶೇಕ್‌ ಬಗ್ಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದೇನು?

Leave a Reply

Your email address will not be published. Required fields are marked *