Sunita Williams: 27 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್

NASA astronaut Sunita Williams retires

ನವದೆಹಲಿ: ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ತಮ್ಮ ಬಾಹ್ಯಾಕಾಶ ಹಾರಾಟದಿಂದ ನಿವೃತ್ತಿ ಘೋಷಣೆ ಮಾಡಿದ್ದು, ಈ ವಿಚಾರವಾಗಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

27 ವರ್ಷಗಳ ಅದ್ಭುತ ಜೀವನ

ಸುನೀತಾ ವಿಲಿಯಮ್ಸ್‌ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂರು ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ್ದಾರೆ. ಅದರ ಜೊತೆಗೆ ವಿವಿಧ ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಸಹ ದಾಖಲೆಗಳನ್ನು ಮಾಡಿದ್ದು, ಬರೋಬ್ಬರಿ 27 ವರ್ಷಗಳ ಅದ್ಭುತವಾದ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡಿದ್ದ ಸುನೀತಾ

ಇನ್ನು 60 ವರ್ಷದ ಸುನೀತಾ ವಿಲಿಯಮ್ಸ್‌ ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ಅಮೇರಿಕನ್ ಸೆಂಟರ್‌ನಲ್ಲಿ ಆಯೋಜಿಸಲಾದ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದ್ದರು.  ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕೇವಲ ಎಂಟು ದಿನಗಳ ಕಾರ್ಯಾಚರಣೆಯು ಜೀವಮಾನದ ಸವಾಲಾಗಿ ಪರಿಣಮಿಸಿ, ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ಸಮಯದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 27 ವರ್ಷಗಳ ಸೇವೆಯ ನಂತರ, ನಾಸಾ ಗಗನಯಾತ್ರಿ ಸುನಿ ವಿಲಿಯಮ್ಸ್ ಡಿಸೆಂಬರ್ 27, 2025 ರಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಮಿಂಚಿನ ಕಾರ್ಯಾಚರಣೆ, 8 ನಕ್ಸಲರ ಹತ್ಯೆ

Leave a Reply

Your email address will not be published. Required fields are marked *