ಕೇರಳ: ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಪ್ರವಾಸದಲ್ಲಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಕೇರಳದ ಜನರಿಗೆ ಕೇಂದ್ರದ ಮೇಲೆ ನಂಬಿಕೆ ಇದೆ
ತಿರುವನಂತರಪುರಂ ಮಹಾನಗರಪಾಲಿಕೆಯಲ್ಲಿನ ಬಿಜೆಪಿ ಸಾಧನೆ ಸಾಧಾರಣವಲ್ಲ. ಇದೊಂದು ದಿಗ್ವಿಜಯ. ಕೇರಳದಲ್ಲಿ ಜನರಿಗೆ ಕೇಂದ್ರ ಸರ್ಕಾರದ ಬಗ್ಗೆ ನಂಬಿಕೆ ಬಂದಿದ್ದು, ಅವರ ಸೇವೆಗೆ ಅವಕಾಶ ನೀಡಿದ್ದಾರೆ. ಈ ಮೂಲಕ ಎಲ್ ಡಿಎಫ್ (LDF) , ಯುಡಿಎಫ್ (UDF) ಮುಕ್ತ ಕೇರಳ ಸ್ಥಾಪನೆಗೆ ಜಯ ದೊರೆಕಿದೆ. ನಿಮ್ಮ ಪ್ರೀತಿಗೆ ಆಭಾರಿ, 1987ರಲ್ಲಿ ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ ಅಹಮದಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಮೊದಲ ಗೆಲುವು ಸಿಕ್ಕಂತೆ ಕೇರಳದಲ್ಲಿ ಬಿಜೆಪಿಯ ಆಡಳಿತದ ಪರ್ವ ಆರಂಭವಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ ನಡೆಸಿದ್ದು,. ರಸ್ತೆಯ ಇಕ್ಕೆಲಗಳಲ್ಲಿದ್ದ ಜನಸ್ತೋಮ, ಪ್ರಧಾನಿಯತ್ತ ಕೈಬೀಸಿ ಘೋಷಣೆ ಕೂಗಿದರು.
ಇನ್ನು ಈ ಸಂದರ್ಭದಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ತಿರುವನಂತರಪುರಂ ನೂತನ ಮೇಯರ್, ಬಿ.ವಿ. ರಾಜೇಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೇಂದ್ರದಿಂದ ಕೇರಳ ಅಭಿವೃದ್ಧಿ, ತಿರುವನಂತಪುರದಲ್ಲಿ ಮೋದಿ ಭಾಷಣ
