Narendra Modi: ಎಐ ಇಂಪ್ಯಾಕ್ಟ್ ಶೃಂಗಸಭೆ – 2026ಗೆ ಚಾಲನೆ ನೀಡಿದ ಮೋದಿ

Narendra Modi inaugurated AI impact summit

ನವದೆಹಲಿ: ಬಹು ನಿರೀಕ್ಷಿತ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ – 2026  ದೆಹಲಿಯಲ್ಲಿ ಅಧಿಕೃತವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ.

60ಕ್ಕೂ ಹೆಚ್ಚು ದೇಶಗಳಿಂದ ಅತಿಥಿಗಳು

ಜಾಗತಿಕ ಆದ್ಯತೆಗಳೊಂದಿಗೆ ಹೊಂದಿಕೆಯಾಗುವ ನವೀನ ಹಾಗೂ ಪರಿಣಾಮಕಾರಿ ಕೃತಕ ಬುದ್ದಿಮತ್ತೆ ಬಳಕೆ ನಿಟ್ಟಿನಲ್ಲಿ ವಿಶ್ವದ ಗಮನ ಸೆಳೆದಿರುವ ಈ ಶೃಂಗಸಭೆ, ಭಾರತ ಮಂಟಪದಲ್ಲಿ ಆಯೋಜನೆಗೊಂಡಿದೆ. 60ಕ್ಕೂ ಹೆಚ್ಚು ದೇಶಗಳಿಂದ 4 ಸಾವಿರದ 650ಕ್ಕೂ ಹೆಚ್ಚು ತಜ್ಞರು ಭಾಗವಹಿಸುತ್ತಿದ್ದು, ಉದ್ಯಮಿಗಳು, ತಂತ್ರಜ್ಞಾನ ಕ್ಷೇತ್ರದ ಗಣ್ಯರು, ನವೋದ್ಯಮಗಳ ಪ್ರವರ್ತಕರು ಪಾಲ್ಗೊಳ್ಳುತ್ತಿದ್ದು, ಶೃಂಗಸಭೆಯು ಮೂರು ಪ್ರಮುಖ ವಿಚಾರಗಳ ಅಡಿಯಲ್ಲಿ ರೂಪುಗೊಂಡಿದೆ.

ಏನಿದರ ವಿಶೇಷತೆ?

 AI For ALL,  ಮಹಿಳಾ ಪ್ರಾತಿನಿಧ್ಯದ  AI- By Her  ಮತ್ತು ಯುವ ಪ್ರಾತಿನಿಧ್ಯದ YUV-AI,  ಶೀರ್ಷಿಕೆಗಳಡಿ ವಿಚಾರ ವಿನಿಮಯ ನಡೆಯಲಿದ್ದು, ಇಂದು ಮತ್ತು ನಾಳೆ ಭಾರತ ಮಂಟಪ ಮತ್ತು ಸುಷ್ಮಾ ಸ್ವರಾಜ್ ಭವನದಲ್ಲಿ ನಡೆಯುವ ಶೃಂಗಸಭೆಯ  ಅಂತಿಮ ಸ್ಪರ್ಧೆ  ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 90 ಅಗ್ರ ತಂಡಗಳಿಂದ ಯೋಜನಾ ಪರಿಕ್ರಮಗಳು ಪ್ರಕಟಗೊಳ್ಳಲಿವೆ. ಈ ಮಧ್ಯೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ರಾಷ್ಟ್ರವ್ಯಾಪಿ ಡಿಜಿಟಲ್ ಅಭಿಯಾನಕ್ಕೆ ಚಾಲನೆ ನೀಡಿದೆ.

ಶೃಂಗಸಭೆ ಆಸ್ಟ್ರೇಲಿಯಾ, ಜಪಾನ್, ರಷ್ಯಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಟ್ಜರ್ ಲೆಂಡ್ ಸೇರಿದಂತೆ 13 ದೇಶಗಳ ವೇದಿಕೆಗಳನ್ನು ಒಳಗೊಂಡಿದೆ. 300ಕ್ಕೂ ಹೆಚ್ಚು ತಾಂತ್ರಿಕ ಪ್ರದರ್ಶನಗಳಿದ್ದು, 600ಕ್ಕೂ ಹೆಚ್ಚು ಉನ್ನತ ಸಾಮರ್ಥ್ಯದ ಸ್ಟಾರ್ಟ್ ಅಪ್ ಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಸಂದರ್ಶಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಆರೋಗ್ಯ, ರಕ್ಷಣೆ, ಕೃಷಿ ಮತ್ತು ಆಡಳಿತ ವಲಯಗಳಲ್ಲಿ ಕೃತಕ ಬುದ್ದಿಮತ್ತೆಯ ಪರಿಣಾಮ ಮತ್ತು ಭವಿಷ್ಯದ ಕುರಿತು ಮಹತ್ವದ ವಿಚಾರ ಮಂಥನ ನಡೆಯಲಿದೆ.

ಇದನ್ನೂ ಓದಿ: ಇಡೀ ವಿಶ್ವದ ಕಣ್ಣು ಭಾರತದ ಮೇಲೆ ನೆಟ್ಟಿದೆ: ನರೇಂದ್ರ ಮೋದಿ

Leave a Reply

Your email address will not be published. Required fields are marked *