Narendra Modi: ಅಸ್ಸಾಂನಲ್ಲಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

Narendra Modi in assam inaugurated many development program

ಅಸ್ಸಾಂ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿನ್ನೆ ಅಸ್ಸಾಂಗೆ ಭೇಟಿ ನೀಡಿದ್ದು, ರಾಜ್ಯದ ಮೂಲಸೌಕರ್ಯ, ಶಿಕ್ಷಣ ಮತ್ತು ಡಿಜಿಟಲ್ ವಲಯಕ್ಕೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಸುಮಾರು 5 ಸಾವಿರದ  450 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಈಶಾನ್ಯ ಭಾರತದಲ್ಲಿ ವಿಶೇಷ ಸೌಲಭ್ಯ

ಮೋದಿ ಅವರು, ದಿಬ್ರುಗಢದ ಮೋರನ್ ಬೈಪಾಸ್‌ನಲ್ಲಿ ನಿರ್ಮಿಸಲಾಗಿರುವ ‘ತುರ್ತು ಲ್ಯಾಂಡಿಂಗ್ ಸೌಲಭ್ಯ’ದಲ್ಲಿ ಇಳಿಯುವ ಮೂಲಕ ಪ್ರವಾಸ ಆರಂಭಿಸಿದ್ದಾರೆ.  ಈಶಾನ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸೌಲಭ್ಯ ನಿರ್ಮಾಣವಾಗಿದೆ. ಇದು ಯುದ್ಧ ವಿಮಾನಗಳು ಮತ್ತು ಸಾರಿಗೆ ವಿಮಾನಗಳ ತುರ್ತು ಲ್ಯಾಂಡಿಂಗ್‌ಗೆ ಪೂರಕವಾಗಿದೆ. ನೈಸರ್ಗಿಕ ವಿಕೋಪ ಅಥವಾ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ನಡೆಸಲು ಇದು ಸಹಕಾರಿಯಾಗಲಿದೆ.

ವೈಮಾನಿಕ ಪ್ರದರ್ಶನ ವೀಕ್ಷಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನವನ್ನೂ ವೀಕ್ಷಿಸಿದ್ದು, ಅಸ್ಸಾಂ ಅಭಿವೃದ್ಧಿ ವಿಚಾರವಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ವಿಕಸಿತ ಭಾರತದ ಪರಿಕಲ್ಪನೆ ಈ ಬಜೆಟ್‌: ಪಿಯೂಷ್‌ ಗೋಯಲ್

Leave a Reply

Your email address will not be published. Required fields are marked *