ಮೈಸೂರು: ಮೈಸೂರಿನಲ್ಲಿರುವ ಪ್ರಮುಖ ತೃತೀಯ ಹಂತದ ಆಸ್ಪತ್ರೆಯಾದ ಅಪೋಲೊ ಬಿಜಿಎಸ್ ಆಸ್ಪತ್ರೆಯು (Apollo BGS Hospital) ಮೈಸೂರಿನ ಮೊದಲ ಸಮಗ್ರ ರೊಬೊಟಿಕ್ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದು ಈ ಪ್ರದೇಶ ವ್ಯಾಪ್ತಿಯಲ್ಲಿಅತ್ಯಾಧುನಿಕ ಶಸ್ತ್ರಚಿಕಿತ್ಸಾ ಆರೈಕೆಯಲ್ಲಿ ಸಾಧಿಸಿದ ಪ್ರಮುಖ ಮೈಲಿಗಲ್ಲು.
ಒಂದೇಸೂರಿನಡಿ ಅನೇಕ ಚಿಕಿತ್ಸೆ
ಈ ಕಾರ್ಯಕ್ರಮವು ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ, ಕಾರ್ಡಿಯೋಥೊರಾಸಿಕ್ ಮತ್ತುನಾಳೀಯ ಶಸ್ತ್ರಚಿಕಿತ್ಸೆ(CTVS), ಇಎನ್ ಟಿ, ಸ್ತ್ರೀರೋಗ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ಆಂಕೊಲಾಜಿ, ಜಠರಗರುಳಿನ ಮತ್ತು HPBಗೆ ಸಂಬಂಧಿಸಿದಂತ ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ಒಂದೇಸೂರಿನಡಿ ನೀಡಲಾಗುತ್ತದೆ.

ರೊಬೊಟಿಕ್ ಶಸ್ತ್ರಚಿಕಿತ್ಸೆಯು ನಿಜವಾದ 3D ಹೈ-ಡೆಫಿನಿಷನ್ ನೋಟವನ್ನು ನಿಖರವಾಗಿ ನೀಡುತ್ತದೆ. ಸಂಕೀರ್ಣ ಅಂಗರಚನಾ ಪ್ರದೇಶಗಳನ್ನೂಸುಲಭವಾಗಿ ಕೈಗೆ ಸಿಗುವಂತೆ ಮಾಡುತ್ತದೆ ಮತ್ತುಪ್ರಮುಖ ಅಂಗ ರಚನೆಗಳಿಗೆ ರಕ್ಷಣೆ ಒದಗಿಸುತ್ತದೆ. ಇದರಿಂದ ಕಡಿಮೆ ನೋವು, ಕಡಿಮೆ ರಕ್ತದ ನಷ್ಟ ಉಂಟಾಗುತ್ತದೆ. ಅಲ್ಲದೇ, ರೋಗಿಗಳಿಗೆ ತ್ವರಿತ ಚೇತರಿಕೆ ನೀಡುವುದರೊಂದಿಗೆ ಆಸ್ಪತ್ರೆಯ ವಾಸ್ತವ್ಯವನ್ನುಕೂಡ ಕಡಿಮೆಯಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಪೋಲೊಬಿಜಿಎಸ್ ಆಸ್ಪತ್ರೆಯ ವರಿಷ್ಠರು, ಈ ತಂತ್ರಜ್ಞಾನ ಪರಿಚಯಿಸುವ ಮೂಲಕ ಅಪೋಲೊ ಬಿಜಿಎಸ್ ಆಸ್ಪತ್ರೆಯು ವಿಶ್ವ ದರ್ಜೆಯ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಮೈಸೂರಿಗೂ ತರುವ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ. ಚಿಕಿತ್ಸೆಗಾಗಿ ಮೆಟ್ರೋನಗರಗಳಿಗೆ ರೋಗಿಗಳು ಪ್ರಯಾಣಿಸುವ ಪ್ರಮೇಯವನ್ನುಈ ಪ್ರಯತ್ನ ತಗ್ಗಿಸುತ್ತದೆ ಎಂದರು.

“ರೋಬೋಟಿಕ್ ನೆರವಿನ ಸರ್ಜರಿಯನ್ನು ಪರಿಚಯಿಸುವ ಮೂಲಕ ಅಪೋಲೊಬಿಜಿಎಸ್ ಆಸ್ಪತ್ರೆ ಮೈಸೂರಿನಲ್ಲಿ ಶಸ್ತ್ರಚಿಕಿತ್ಸೆಯ ಶ್ರೇಷ್ಠತೆಗೆ ಹೊಸ ದಾರಿ ತೋರಿದೆ. ಈ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸಕರ ಕಾರ್ಯವೈಖರಿಯು ಅಪ್ರತಿಮವಾಗಿರುತ್ತದೆ. ಇದರಿಂದ ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಬಹುದು” ಎಂದು ಅಪೋಲೊ ಆಸ್ಪತ್ರೆಗಳ ಕರ್ನಾಟಕ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್. ಜಿ. ಭರತೀಶ ರೆಡ್ಡಿ ಹೇಳಿದರು.
ಏನಿದರ ವಿಶೇಷತೆ?
“ನಮ್ಮ ರೊಬೊಟಿಕ್ ಶಸ್ತ್ರಚಿಕಿತ್ಸಾ ತಂಡವು ನಿಖರ ಶಸ್ತ್ರಚಿಕಿತ್ಸೆ ನಡೆಸುವುದರೊಂದಿಗೆ ರೋಗಿಯ ಸುರಕ್ಷತೆ ಕಾಪಾಡುವ ಬದ್ಧತೆ ಹೊಂದಿದೆ. ನಾವು ಸುಧಾರಿತ ತಂತ್ರಜ್ಞಾನವನ್ನು ಪರಿಣತಿಯೊಂದಿಗೆ ಸಂಯೋಜಿಸುವ ಮೂಲಕ ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ಗಾಯ ಹಾಗೂ ರೋಗಿಗಳನ್ನು ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಮಾಡುವ ಗುರಿ ಹೊಂದಿದ್ದೇವೆ” ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆಗಳ ರೋಬೋಟಿಕ್ ಶಸ್ತ್ರಚಿಕಿತ್ಸಕರ ತಂಡ ಹೇಳಿದೆ.
ಈ ಕಾರ್ಯಕ್ರಮಕ್ಕೆ ತರಬೇತಿ ಪಡೆದ ರೊಬೊಟಿಕ್ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತುಕ್ಲಿನಿಕಲ್ ಸಿಬ್ಬಂದಿಯ ತಂಡದ ಬೆಂಬಲವಿದೆ. ಹೀಗಾಗಿ ಇದು ರೋಗಿಗಳ ಆರೈಕೆ ಮತ್ತುಸುರಕ್ಷತೆಯ ದೃಷ್ಟಿಯಲ್ಲಿಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳಿಗೆ ಸರಿಸಮಾನವಾಗಿದೆ.
ಇದನ್ನೂ ಓದಿ: ಪಕ್ಷದ ವಿಚಾರ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿಕೆ ಶಿವಕುಮಾರ್
