ಬಾಗಲಕೋಟೆ: ಯಾರೋ ಒಬ್ಬರು ಆಡಿಯೋವನ್ನ ದುರುಪಯೋಗ ಮಾಡಿಕೊಂಡಿದ್ದು, ನನ್ನ ಹಾಗೂ ಮಗನ ಹೆಸರನ್ನ ಕೆಡಿಸುತ್ತಿದ್ದಾರೆ ಎಂದು ಸಚಿವ ತಿಮ್ಮಾಪುರ (Timmapura) ಅವರು ಹೇಳಿದ್ದಾರೆ.
ನಮ್ಮ ಹೆಸರನ್ನ ಸುಮ್ಮನೆ ಬಳಸಲಾಗುತ್ತಿದೆ
ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿನ ಅಕ್ರಮ ಆರೋಪ ಹಿನ್ನೆಲೆ ತಮ್ಮ ವಿರುದ್ದ ದೂರು ಬಂದ ಹಿನ್ನೆಲೆ ಸಿಎಂ ವರದಿ ಕೇಳಿದ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಅಬಕಾರಿ ಇಲಾಖೆಯಲ್ಲಿ ಡಿಸಿ ಸುಪರಿಂಡೆಂಟ್ ಒಬ್ಬ ಕಾನ್ಸ್ಟೇಬಲ್ ಅನ್ನು ಲೋಕಾಯುಕ್ತರು ಟ್ರ್ಯಾಕ್ ಮಾಡಿದ್ದಾರೆ. ಅವರನ್ನು ಈಗಾಗಲೇ ಅರೆಸ್ಟ್ ಕೂಡ ಮಾಡಿದ್ದಾರೆ.ನಂತರ ನಾವು ಅವರನ್ನು ನಾವು ಸಸ್ಪೆಂಡ್ ಮಾಡಿದ್ದೇವೆ. ಯಾವನೋ ಒಬ್ಬ ಅಡಿಯೋ ದುರುಪಯೋಗ ಮಾಡಿಕೊಂಡು ನಮ್ಮ ಹೆಸರನ್ನು. ನನ್ನ ನನ್ನ ಮಗನ ಹೆಸರನ್ನು ಹೇಳುತ್ತಿದ್ದಾನೆ. ಕೆಲ ಅಧಿಕಾರಿಗಳ ಹೆಸರನ್ನು ತೆಗೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಹಣ ಮಾಡಲು ನಮ್ಮ ಹೆಸರು ಬಳಕೆ
ಅಲ್ಲದೇ, ಇಲಾಖೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ರೆವೆನ್ಯು ಡಿಸಿ ತಗೊಬೇಕು, ಜಾಯಿಂಟ್ ಕಮಿಷನರ್ ತಗೋಬೇಕು, ಸೂಪರ್ ಡೆಂಟ್ ಸೂಪರಿಂ ಡೆಂಟ್ ಗಳಿಗೆ ಲಾಗಿನ್ ನಲ್ಲಿ ಬರಬಾರದು ಎಂದು ನಾನು ಹೇಳಿದ್ದೆ. ಯಾರಿಗೆ ಈ ಲಾಗಿನ್ ಇಲ್ಲವೋ ಅವರದ್ದೇ ಆ ಆಡಿಯೋ. ಅವರಿಗೆ ಹಾಗೂ ಫೈಲ್‌ಗಳಿಗೂ ಏನು ಸಂಬಂಧ? ಅವರು ಮೋಸ ಮಾಡಿ ಹಣ ಮಾಡಲು ನಮ್ಮ ಹೆಸರನ್ನ ಬಳಕೆ ಮಾಡಲಾಗುತ್ತಿದೆ. ಸುಮ್ಮನೆ ನಮ್ಮ ಮಕ್ಕಳ ಹೆಸರನ್ನ ಸಹ ಆಡಿಯೋದಲ್ಲಿ ತೆಗೆದುಕೊಳ್ಳಲಾಗಿದೆ. ಈ ರೀತಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಬಕಾರಿ ಸಚಿವರಿಗೆ ಸಂಕಷ್ಟ, ಅಧಿಕಾರಿಗಳ ಜೊತೆ ಸೇರಿ ಅಕ್ರಮ ಆರೋಪ
