Mansukh Mandaviya: ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಮುಖ್ಯ: ಮನ್ಸುಖ್ ಮಾಂಡವೀಯ

minister Mansukh Mandaviya about indian youths

ನವದೆಹಲಿ: ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಯುವಜನರ ಮಹತ್ತರ ಪಾತ್ರ ಅಗತ್ಯ ಎಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ (Mansukh Mandaviya) ಹೇಳಿದ್ದಾರೆ.

ಯುವಜನರನ್ನ ಉತ್ತೇಜಿಸಲು ಕಾರ್ಯಕ್ರಮ

ದೆಹಲಿಯಲ್ಲಿ ವಿಕಸಿತ ಭಾರತ ಯುವಜನರ ಮಾತುಕತೆ – 2026  ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನ, ಉದ್ಯಮಶೀಲತೆ, ಆಡಳಿತ, ಸುಸ್ಥಿರತೆ ಮತ್ತು ಸಾಮಾಜಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಪರಿಹಾರೋಪಾಯಗಳನ್ನು ಕೊಡುಗೆ ನೀಡಲು ಈ ಸಮಾವೇಶ ಯುವಜನರನ್ನು ಉತ್ತೇಜಿಸಲಿದೆ ಎಂದು ಹೇಳಿದ್ದಾರೆ.

ದೇಶದ ಜನರೇ ದೊಡ್ಡ ಶಕ್ತಿ

ಅಲ್ಲದೇ, ಈ ಸಮಾವೇಶವು 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನರಲ್ಲಿ ಪ್ರತಿಭೆ ಮತ್ತು ಸೃಜನಶೀಲತೆ ಗುರುತಿಸುವ ಪ್ರಕ್ರಿಯೆಯಾಗಿದೆ.  ದೇಶದ ಜನಸಂಖ್ಯೆಯೇ ದೊಡ್ಡ ಶಕ್ತಿಯಾಗಿದ್ದು, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಯುವಜನರಲ್ಲಿನ ವಿಶೇಷ ಆಲೋಚನೆಗಳು ಮತ್ತು ಆವಿಷ್ಕಾರ ಉತ್ತೇಜಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ ಯುವ ಮನಸ್ಸುಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಈ ವೇದಿಕೆ ಪ್ರತಿಬಿಂಬಿಸುತ್ತದೆ ಎಂದು ಸಚಿವರು ತಿಳಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ನಿನ್ನೆ ಆರಂಭವಾದ ಮೂರು ದಿನಗಳ ಈ ಸಮಾವೇಶ 12ರಂದು ಸಮಾರೋಪಗೊಳ್ಳಲಿದೆ.

ಇದನ್ನೂ ಓದಿ: ಬಿಜೆಪಿ ಕಾಂಗ್ರೆಸ್-ಎಐಎಂಐಎಂ ಮೈತ್ರಿ? ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ

Leave a Reply

Your email address will not be published. Required fields are marked *