ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ಪ್ರಾದೇಶಿಕ ಪರಿಸ್ಥಿತಿ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, (Jai Shankar) ಸೌದಿ ಅರೆಬಿಯಾ ಹಾಗೂ ಯುಎಇ ಸಹವರ್ತಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ.
ಯಾವೆಲ್ಲಾ ನಾಯಕರ ಜೊತೆ ಚರ್ಚೆ?
ಸೌದಿಅರೆಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಪರ್ಹಾನ್ ಹಾಗೂ ಯುಎಇನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಹೇದ್ ಅಲ್ ನಹ್ಯಾನ್ ಅವರೊಂದಿಗೆ ಚರ್ಚೆ ನಡೆಸಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡಾ. ಎಸ್. ಜೈಶಂಕರ್, ಪಶ್ಚಿಮ ಏಷ್ಯಾದ ಸದ್ಯದ ಬೆಳವಣಿಗೆಗಳು ಹಾಗೂ ವಿವಿಧ ಪ್ರಾದೇಶಿಕ ವಿಷಯಗಳ ಕುರಿತಂತೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರದಿಂದ ಸೂಕ್ತ ಕ್ರಮ
