ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಪ್ರತಿಯೊಂದು ವಿಚಾರಗಳು ಬಹಳ ಮುಖ್ಯವಾಗುತ್ತದೆ. ಗ್ರಹಗಳ ಸಂಚಾರ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಇಂದು ಕುಂಭ ರಾಶಿಯಲ್ಲಿ ಬುಧ (Mercury), ಶುಕ್ರ (Venus) ಮತ್ತು ರಾಹು (Rahu) ಗ್ರಹಗಳ ಸಂಯೋಗ ಆಗುತ್ತಿದೆ. ಈ ಸಂಯೋಗದ ಕಾರಣದಿಂದ ತ್ರಿಗ್ರಾಹಿ ಯೋಗ (Trigrahi Yoga) ಸೃಷ್ಟಿ ಆಗುತ್ತದೆ. ಈ ಯೋಗ ಬಹಳ ವಿಶೇಷವಾದ ಫಲಗಳನ್ನ ನೀಡುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಮಿಥುನ ರಾಶಿ: ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಅದೃಷ್ಟವು ನಿಮಗೆ ಬಹುತೇಕ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನೀಡುತ್ತದೆ. ಇದರಿಂದಾಗಿ ನೀವು ಹೊಸ ಯೋಜನೆಯಿಂದ ಲಾಭವನ್ನು ಸಹ ಪಡೆಯಬಹುದು. ಉದ್ಯೋಗಿಗಳಿಗೆ ಅವಧಿ ಅನುಕೂಲಕರವಾಗಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ನಿಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ನೀವು ಹೊಸ ಯೋಜನೆಗಳನ್ನು ಈ ಸಮಯದಲ್ಲಿ ಮಾಡಬಹುದು. ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರ ಸ್ಥಾನಗಳು ಮತ್ತು ಪ್ರತಿಷ್ಠೆಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.
ತುಲಾ ರಾಶಿ: ತ್ರಿಗ್ರಾಹಿ ಯೋಗವು ಜೀವನದಲ್ಲಿ ಭೌತಿಕ ಆನಂದವನ್ನು ನೀಡುತ್ತದೆ. ವ್ಯಾಪಾರ ಮಾಡುವವರೂ ಒಳ್ಳೆಯ ಹಣ ಗಳಿಸಬಹುದು. ವೃತ್ತಿ ಮತ್ತು ವ್ಯವಹಾರಗಳಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತವ ಸಮಯ ಇದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ಯೋಗದಿಂದ ಅದೃಷ್ಟ ಹೆಚ್ಚಾಗಲಿದೆ, ಈ ಸಮಯದಲ್ಲಿ ನೀವು ಏನೇ ಮಾಡಿದರೂ ಅದರಲ್ಲಿ ಸಂಪೂರ್ಣ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಇದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ.

ವೃಶ್ಚಿಕ ರಾಶಿ: ಈ ಯೋಗದ ಕಾರಣದಿಂದ ಕೆಲವು ಒಳ್ಳೆಯ ಸುದ್ದಿಗಳು ಈ ಸಮಯದಲ್ಲಿ ನಿಮ್ಮನ್ನ ಹುಡುಕಿ ಬರಲಿದೆ.ಅಥವಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ತಮ್ಮ ಕೆಲಸವನ್ನು ವಿಸ್ತರಿಸಬಹುದು. ಇದು ನಿಮ್ಮ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ವಾಹನಗಳು ಮತ್ತು ಆಸ್ತಿಯನ್ನು ಖರೀದಿಸುವ ಅವಕಾಶವಿದೆ. ಆಸ್ತಿ ಸಂಬಂಧಿತ ವ್ಯವಹಾರದಲ್ಲಿ ಲಾಭವಾಗಲಿದೆ. ಪೋಷಕರೊಂದಿಗಿನ ಸಂಬಂಧವು ಬಲವಾಗಿರುತ್ತದೆ. ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪುವ ಸಾಧ್ಯತೆಗಳಿವೆ.
ಧನಸ್ಸು ರಾಶಿ: ಅನಿರೀಕ್ಷಿತವಾಗಿ ನಿಮಗೆ ಹಣ ಸಿಗಲಿದೆ. ಈ ಅವಧಿಯಲ್ಲಿ ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ. ನಿಮ್ಮ ಮಾತಿನಿಂದ ನೀವು ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಮಾಧ್ಯಮ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಈ ಯೋಗವು ಶುಭವಾಗಿರುತ್ತದೆ. ಸಮಯದಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಆಮದು-ರಫ್ತು ವ್ಯವಹಾರ ಮಾಡುವವರಿಗೆ ಈ ಸಮಯ ಶುಭವಾಗಿರುತ್ತದೆ.
ಮೀನ ರಾಶಿ: ದೀರ್ಘಕಾಲದಿಂದ ಬಾಕಿ ಉಳಿದಿದ್ದ ಹಣವು ಕೈಸೇರಲಿದ್ದು, ಆತ್ಮವಿಶ್ವಾಸದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ವೃತ್ತಿ ನಿಮಿತ್ತ ಮಾಡುವ ಪ್ರಯಾಣಗಳು ಶುಭ ಫಲ ನೀಡಲಿವೆ. ಹೂಡಿಕೆದಾರರಿಗೆ ಇದು ಅತ್ಯುತ್ತಮ ಸಮಯ. ಹೊಸ ಆಸ್ತಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ. ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದ್ದು, ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತಸ ತರಲಿದೆ.
ಇದನ್ನೂ ಓದಿ: ಒಂದು ವಾರ ನಿರೀಕ್ಷಿತ ಫಲ ಸಿಗುತ್ತೆ, ಆರೋಗ್ಯದ ಬಗ್ಗೆ ಗಮನ ಇರಲಿ
