KKRTC Recruitment: 78 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಾರಿಗೆ ನಿಗಮದಿಂದ ಬಂಪರ್‌ ಆಫರ್

KKRTC Recruitment 2026 for 78 posts

ಬೀದರ್:‌ ಸರ್ಕಾರಿ ಕೆಲಸವನ್ನ ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲಾ ಬಾರಿಯೂ ಅವಕಾಶಗಳು ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಅದನ್ನ ಬಳಸಿಕೊಂಡು ಕೆಲಸವನ್ನ ಗಿಟ್ಟಿಸಿಕೊಳ್ಳಬೇಕು. ಇದೀಗ ಬಹಳ ಅದ್ಭುತವಾದ ಅವಕಾಶವೊಂದು ಬಂದಿದ್ದು, ಬರೋಬ್ಬರಿ 78 ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC Recruitment ) ಸಂದರ್ಶನ ಮಾಡುತ್ತಿದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಯಾವ ಹುದ್ದೆಗೆ ಅರ್ಜಿ ಆಹ್ವಾನ? ವೇತನ ಹಾಗೂ ಇನ್ನಿತರ ಮಾಹಿತಿ ಇಲ್ಲಿದೆ.

KKRTC ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆಗಳ ಸಂಖ್ಯೆ: 78
ಉದ್ಯೋಗ ಸ್ಥಳ: ಬೀದರ್  
ಹುದ್ದೆ ಹೆಸರು: ಚಾಲಕ

KKRTC ನೇಮಕಾತಿ 2026 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ: KKRTC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು , ಭಾರೀ ಸಾರಿಗೆ ವಾಹನ ಪರವಾನಗಿ ಮತ್ತು ಭಾರೀ ಪ್ರಯಾಣಿಕರನ್ನು ಓಡಿಸಲು ಕರ್ನಾಟಕ ಬ್ಯಾಡ್ಜ್ ಅನ್ನು ಹೊಂದಿರಬೇಕು.

ವಯೋಮಿತಿ:  04-02-2026 ರಂತೆ ಕನಿಷ್ಠ 24 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗೆ

ವಯೋಮಿತಿ ಸಡಿಲಿಕೆ:

ಪ್ರವರ್ಗ 2A, 2B, 3A & 3B ಅಭ್ಯರ್ಥಿಗಳು: 03 ವರ್ಷಗಳು

SC/ST ಅಭ್ಯರ್ಥಿಗಳು: 05 ವರ್ಷಗಳು

ಆಯ್ಕೆ ಪ್ರಕ್ರಿಯೆ

ನೇರ ಸಂದರ್ಶನ

ಸಂದರ್ಶನ ನಡೆಯುವ ಸ್ಥಳ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಳೆಯ ಬಸ್ ನಿಲ್ದಾಣ ಬೀದರ್ ವಿಭಾಗೀಯ ಕಚೇರಿ, ಬೀದರ್ 

ಪ್ರಮುಖ ದಿನಾಂಕಗಳು:

ಅಧಿಸೂಚನೆ ಬಿಡುಗಡೆ ದಿನಾಂಕ: 20-01-2026

ವಾಕ್-ಇನ್ ಸಂದರ್ಶನ ಫೆಬ್ರವರಿ 03 ಮತ್ತು 04, 2026 ರಂದು ನಡೆಯಲಿದೆ.

ಅಧಿಕೃತ ವೆಬ್‌ಸೈಟ್: kkrtc.karnataka.gov.in

ಇದನ್ನೂ ಓದಿ: ಬಿಎಸ್‌ಸಿ ಆಗಿದೆಯಾ? ಕೇಂದ್ರ ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೈ ಮಾಡಿ

Leave a Reply

Your email address will not be published. Required fields are marked *