ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA – Karnataka State Cricket Association) ಚುನಾವಣೆ ಫಲಿತಾಂಶ (Election Result) ಪ್ರಕಟವಾಗಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad) ಬಣ ಗೆದ್ದು ಬೀಗಿದೆ.
749 ಮತಗಳನ್ನು ಪಡೆದು ಗೆದ್ದ ವೆಂಕಟೇಶ್ ಪ್ರಸಾದ್
ಸುಮಾರು 749 ಮತಗಳನ್ನು ಪಡೆದು ವೆಂಕಟೇಶ್ ಪ್ರಸಾದ್ ಅವರು ಗೆದ್ದು ಬೀಗಿದ್ದು, ಈ ಮೂಲಕ ಕೆಎಸ್‌ಸಿಎ ಅಧ್ಯಕ್ಷರಾಗಿ (KSCA president) ಆಯ್ಕೆ ಆಗಿದ್ದಾರೆ. ಅಲ್ಲದೇ, ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆದ್ದಿದ್ದು, ಕೆಎನ್ ಶಾಂತಕುಮಾರ್ ಬಣಕ್ಕೆ ಸೋಲಾಗಿದೆ. ಈ ಚುನಾವಣೆಯಲ್ಲಿ ಶಾಂತಕುಮಾರ್ 558 ಮತಗಳನ್ನು ಪಡೆದೆಕೊಂಡಿದ್ದಾರೆ ಎನ್ನಲಾಗಿದೆ.
ಉಪಾಧ್ಯಕ್ಷರಾಗಿ ಸುಜಿತ್ ಸೋಮಸುಂದರ್ ಆಯ್ಕೆ
ಹಾಗೆಯೇ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ 719 ಮತ ಪಡೆದ ಸುಜಿತ್ ಸೋಮಸುಂದರ್ ಆಯ್ಕೆ ಆಗಿದ್ದಾರೆ. ಬಿಕೆ ರವಿ ಅವರು 669 ಮತ ಪಡೆದು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದು, ಬಿಎನ್ ಮಧುಕರ್ 736 ಮತ ಪಡೆದು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಅವರು 675 ಮತ ಪಡೆದು ಜಯಭೇರಿ ಬಾರಿಸಿದ್ದಾರೆ.
ಇದನ್ನೂ ಓದಿ: ಪಲಾಶ್ ಮುಚ್ಚಲ್ ಜೊತೆ ಮದುವೆ ಮುರಿದ ಸ್ಮೃತಿ, ಗೌಪ್ಯತೆ ಕಾಪಾಡಲು ಮನವಿ
