ಕರ್ನಾಟಕ ಸರ್ಕಾರದ (Government of Karnataka) ಆರೋಗ್ಯ ಇಲಾಖೆಯಡಿ (Health Department) 35 ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಹಿರಿಯ ಕಾರ್ಯನಿರ್ವಾಹಕ ವೈದ್ಯರು, ಪ್ರಾದೇಶಿಕ ಸಲಹೆಗಾರರು, ಐಇಸಿ ಸಲಹೆಗಾರರು ಸೇರಿದಂತೆ ಹಲವು ಹುದ್ದೆಗಳಿಗೆ (Job Vacancy) ಅರ್ಜಿ ಆಹ್ವಾನ ಮಾಡಲಾಗಿದ್ದು, ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ?
ಸಹಾಯಕ ಪ್ರಾದೇಶಿಕ ಸಲಹೆಗಾರರು – 6 ಹುದ್ದೆಗಳು
ಡಾಕ್ಟರ್ಸ್ ಇನ್ ಆಫೀಸ್ – 1 ಹುದ್ದೆ
ಪ್ರಾಜೆಕ್ಟ್ ಮ್ಯಾನೇಜರ್ (ಕಡ್ಡಾಯ ಆರೋಗ್ಯ ಯೋಜನೆ) – 1 ಹುದ್ದೆ
ಡಾಕ್ಟರ್ಸ್ ಅಸಿಸ್ಟೆಂಟ್ / ಪ್ರಾಜೆಕ್ಟ್ ಮ್ಯಾನೇಜರ್ – 1+1 ಹುದ್ದೆ
ಪ್ರಾಜೆಕ್ಟ್ ಮ್ಯಾನೇಜರ್ – 1 ಹುದ್ದೆ
ಐಇಸಿ ಸಲಹೆಗಾರರು – 1 ಹುದ್ದೆ
ಟೀಮ್ ಲೀಡರ್ (ಆಯುಷ್ ಪ್ರೀಮಿಯಂ ಪೇಮೆಂಟ್) – 1 ಹುದ್ದೆ
ಪ್ರಾದೇಶಿಕ ಸಲಹೆಗಾರರು (Regional Consultant) – 3 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ ವೈದ್ಯರು (Senior Executive Doctors) – 11 ಹುದ್ದೆಗಳು
ಎಕ್ಸಿಕ್ಯೂಟಿವ್ (ಡೆಂಟಲ್ / ಜಿಐ ಸರ್ವೀಸ್) – 4 ಹುದ್ದೆಗಳು
ಡಿಸ್ಟ್ರಿಕ್ಟ್ ಡೈರೆಕ್ಟರ್ – 5 ಹುದ್ದೆಗಳು
ಒಟ್ಟು ಎಷ್ಟು ಹುದ್ದೆಗಳುಗೆ ಅರ್ಜಿ ಆಹ್ವಾನ: 35
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 5, 2025 ಸಂಜೆ 5:30ರೊಳಗೆ
ಯಾವ ಹುದ್ದೆಗೆ ಎಷ್ಟು ಸಂಬಳ?
ಡಿಸ್ಟ್ರಿಕ್ಟ್ ಡೈರೆಕ್ಟರ್ – 45,000 ರೂ.
ಇತರ ಹುದ್ದೆಗಳು – 45,000 ರಿಂದ 85,000 ರೂ. ವರೆಗೆ
ಸಹಾಯಕ ಪ್ರಾದೇಶಿಕ ಸಲಹೆಗಾರರು – 50,000 ರೂ.
ಪ್ರಾದೇಶಿಕ ಸಲಹೆಗಾರರು – 60,000 ರೂ.
ಐಇಸಿ ಸಲಹೆಗಾರರು – 58,000 ರೂ.
ಹಿರಿಯ ಕಾರ್ಯನಿರ್ವಾಹಕ ವೈದ್ಯರು – 95,000 ರೂ.
ಪ್ರಾಜೆಕ್ಟ್ ಮ್ಯಾನೇಜರ್ – ತಿಂಗಳಿಗೆ 1,50,000 ರೂ.
ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಎಂಬಿಬಿಎಸ್ ಅಥವಾ ಬಿಡಿಎಸ್ ಹುದ್ದೆ ಪೂರ್ಣಗೊಳಿಸಲಿರಬೇಕು. ಇನ್ನು ಕೆಲವು ಹುದ್ದೆಗಳಿಗೆ ಎಂಡಿಎಸ್ / ಪಿಜಿ ಡಿಪ್ಲೊಮಾ ಮತ್ತು 2 ರಿಂದ 10 ವರ್ಷಗಳ ಅನುಭವ ಇರಬೇಕು.
.ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕ ಸ್ವೀಕಾರ ಮಾಡಲಾಗುತ್ತಿದೆ. ಅಧಿಕೃತ ವೆಬ್ಸೈಟ್ https://arogya.karnataka.gov.in/sast ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
