Job Vacancy: ಕರ್ನಾಟಕ ಸರ್ಕಾರದಿಂದ ಬಂಪರ್‌ ಆಫರ್‌, ಈಗಲೇ ಹುದ್ದೆಗಳಿಗೆ ಅರ್ಜಿ ಹಾಕಿ

job vacancy apply for government of karnataka work now

ಬೆಂಗಳೂರು: ಕರ್ನಾಟಕ ಸರ್ಕಾರದ (Government of Karnataka) ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸಂಸ್ಥೆಯೊಂದು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ (Job Vacancy) ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಸ್ಥೆ: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ

ಒಟ್ಟು ಹುದ್ದೆಗಳು: 3

ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕ

ವಿಭಾಗಗಳು: 3

ಯಾವೆಲ್ಲಾ ವಿಭಾಗದಲ್ಲಿ ಹುದ್ದೆ ಖಾಲಿ?

ಬಯೋಟೆಕ್ನಾಲಜಿ (BT), ಮಾಹಿತಿ ತಂತ್ರಜ್ಞಾನ (IT) ಮತ್ತು ಸ್ಟಾರ್ಟ್‌ಅಪ್ (Startups)

ವಿದ್ಯಾರ್ಹತೆ:

ಬಯೋಟೆಕ್ನಾಲಜಿ: ಜೈವಿಕ ತಂತ್ರಜ್ಞಾನದಲ್ಲಿ ಬಿಇ ಪದವಿ ಅಥವಾ ಜೈವಿಕ ತಂತ್ರಜ್ಞಾನ ಅಥವ ಜೀವ ವಿಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ

ಐಟಿ: ಎಂಬಿಎ, ಪಿಜಿಡಿಎಂ, ಪಿಜಿಡಿಬಿಎ ಅಥವಾ ಬಿಇ, ಬಿಎಸ್ಸಿ, ಎಂಎಸ್ಸಿ, ಬಿಕಾಂ ಅಥವಾ ಎಂಕಾಂ ಪದವಿ

ಸ್ಟಾರ್ಟ್‌ಅಪ್ಸ್: ಇಂಜಿನಿಯರಿಂಗ್, ವಿಜ್ಞಾನ ಅಥವಾ ನಿರ್ವಹಣಾ ವಿಷಯದಲ್ಲಿ ಪೂರ್ಣಾವಧಿ ಪದವಿ ಅಥವಾ ನಿರ್ವಹಣೆ, ಸಾರ್ವಜನಿಕ ನೀತಿ ವಿಷಯದಲ್ಲಿ ಸ್ನಾತಕೋತ್ತರ ಪದವಿ

ಅನುಭವ: ಎಲ್ಲಾ ಹುದ್ದೆಗಳಿಗೆ 3 ವರ್ಷದ ಅನುಭವ ಹೊಂದಿರಬೇಕು

ವೇತನ: 45,000 ರೂಪಾಯಿ

ಅರ್ಜಿ ಸಲ್ಲಿಸುವುದು ಹೇಗೆ?

ಇಲಾಖೆಯ  ಅಧಿಕೃತ ವೆಬ್‌ಸೈಟ್ https://eitbt.karnataka.gov.in/217/recruitment/kn ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು

ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 22

ಇದನ್ನೂ ಓದಿ: ಬ್ಯಾಂಕ್‌ನಲ್ಲಿ ಕೆಲಸ ಮಾಡ್ಬೇಕಾ? ಈಗಲೇ ಅಪ್ಲೈ ಮಾಡಿ

Leave a Reply

Your email address will not be published. Required fields are marked *