Republic Day: ವಿದೇಶದಲ್ಲೂ ಗಣರಾಜ್ಯೋತ್ಸವ ಸಂಭ್ರಮ, ಬಾಂಗ್ಲಾದಲ್ಲಿ ಭಾರತೀಯ ಸೈನಿಕರಿಗೆ ಗೌರವ ನಮನ

indian Republic Day celebration in Bangladesh

ನವದೆಹಲಿ: 77ನೇ ಗಣರಾಜ್ಯೋತ್ಸವವನ್ನು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಗೌರವ ಭಾವದಿಂದ ಆಚರಿಸಲಾಗುತ್ತಿದೆ.  ಬಾಂಗ್ಲಾದೇಶದ (Bangladesh) ಢಾಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ, ಭಾರತದ 77ನೇ ಗಣರಾಜ್ಯೋತ್ಸವವನ್ನು (Republic Day)  ಉತ್ಸಾಹ ಮತ್ತು ದೇಶಭಕ್ತಿಯ ಪ್ರತೀಕವಾಗಿ ಆಚರಿಸಲಾಯಿತು.

ಭಾರತೀಯ ಸೈನಿಕರಿಗೆ ಗೌರವ ಅರ್ಪಣೆ

ಚಾನ್ಸೆರಿ ಕಟ್ಟಡದಲ್ಲಿ ನಡೆದ ಆಚರಣೆಗಳಲ್ಲಿ, ಭಾರತೀಯ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,  ಗೌರವ ಸಲ್ಲಿಸಿದರು.  ಶ್ರೀಲಂಕಾದಲ್ಲಿನ ಭಾರತದ ಹೈಕಮಿಷನರ್ ಕಚೇರಿಯಲ್ಲೂ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.  ಭಾರತೀಯ ಶಾಂತಿ ಪಾಲನಾ ಪಡೆ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಲಾಯಿತು. ಶಾಂತಿ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಧೈರ್ಯಶಾಲಿ ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಯಿತು.

ಇದನ್ನೂ ಓದಿ: ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಪ್ರಧಾನ

Leave a Reply

Your email address will not be published. Required fields are marked *