ನೆಲ್ಲಿಕಾಯಿ ಅಂದ್ರೆ ಅನೇಕ ಜನರಿಗೆ ತುಂಬಾ ಇಷ್ಟ. ಪ್ರತಿದಿನ ನೆಲ್ಲಿಕಾಯಿ ತಿನ್ನೋಕೆ ಇಷ್ಟಪಡುವ ಅನೇಕ ಜನ ಇದ್ದಾರೆ. ಈ ನೆಲ್ಲಿಕಾಯಿಯನ್ನ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜಗಳನ್ನ ಪಡೆದುಕೊಳ್ಳಬಹುದು. ಈ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ನೆಲ್ಲಿಕಾಯಿಯಲ್ಲಿ(Amla Benefits) ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಹ ಇದೆ. ಹಾಗಾದ್ರೆ ಈ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್‌ಗಳು, ವಿಟಮಿನ್ ಸಿ, ಎ, ಬಿ ಕಾಂಪ್ಲೆಕ್ಸ್, ಕಬ್ಬಿಣ ಸಮೃದ್ಧವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಇದು ಮುಖ್ಯವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕೀಲು ನೋವಿಗೆ ಪರಿಹಾರ
ವೈದ್ಯರ ಪ್ರಕಾರ, ಪ್ರತಿದಿನ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಇದು ಮೂಳೆಗಳನ್ನ ಬಲಗೊಳಿಸುತ್ತದೆ. ಮುಖ್ಯವಾಗಿ ಇದು ಕೀಲು ನೋವು, ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತದಿಂದ ಪರಿಹಾರ ನೀಡುತ್ತದೆ. ಇದಲ್ಲದೇ, ಹೃದಯ ಸ್ನಾಯುಗಳಿಗೂ ಇದು ಒಳ್ಳೆಯದು.
ಒತ್ತಡಕ್ಕೆ ಪರಿಹಾರ ನೀಡುತ್ತದೆ
ಈ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಒತ್ತಡದಿಂದ ಸಹ ಮುಕ್ತಿ ಪಡೆಯಬಹುದು. ಇದು ನಿದ್ರೆಯ ಸಮಸ್ಯೆಯನ್ನ ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಹಾಗೆಯೇ, ಮೂತ್ರಪಿಂಡದ ಸೋಂಕುಗಳು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಸಹ ನಿವಾರಿಸುತ್ತದೆ.
