Aloo Veggie Toast: ಸೂಪರ್‌ ಈಸಿ ಆಲೂ ವೆಜ್‌ ಟೋಸ್ಟ್‌ ರೆಸಿಪಿ

How to Make Crunchy Aloo Veggie Toast

ಸಂಜೆ ಆಯ್ತು ಅಂದ್ರೆ ಏನಾದರೂ ಸ್ನ್ಯಾಕ್ಸ್‌ ಬೇಕು ಅಂತ ಅನಿಸೋದು ಮಾಮೂಲಿ. ಹಾಗಂತ ಯಾವಾಗಲೂ ಹೊರಗಿನಿಂದ ತಂದು ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಮನೆಯಲ್ಲಿ ವೆರೈಟಿ ವೆರೈಟಿ ಸ್ನ್ಯಾಕ್ಸ್‌ ಮಾಡಬಹುದು. ಅದರಲ್ಲೂ ಆಲೂಗೆಡ್ಡೆ ಇದ್ದರೆ ಸ್ನ್ಯಾಕ್ಸ್‌ ಮಾಡೋದು ತುಂಬಾ ಸುಲಭ. ನೀವೂ ಸಂಜೆ ಸ್ನ್ಯಾಕ್ಸ್‌ ರೆಸಿಪಿ ಹುಡುಕುತ್ತಿದ್ರೆ ನಾವು ಸಹಾಯ ಮಾಡ್ತೀವಿ. ಬಹಳ ಸುಲಭವಾಗಿ ಮನೆಯಲ್ಲಿ ಆಲೂ ವೆಜ್‌ ಟೋಸ್ಟ್‌ (Aloo Veggie Toast) ಮಾಡೋದು ಹೇಗೆ ಎನ್ನುವುದು ಇಲ್ಲಿದೆ.

ಆಲೂ ವೆಜ್‌ ಟೋಸ್ಟ್‌ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿದೆ

2 ಆಲೂಗಡ್ಡೆ

1 ಹಸಿ ಮೆಣಸಿನ ಕಾಯಿ

1 ಕೆಂಪು ಮೆಣಸಿನ ಕಾಯಿ

1  ಟೊಮೆಟೊ (ಸಣ್ಣಗೆ ಹೆಚ್ಚಿಕೊಂಡಿರಿ)

ಶುಂಠಿ ( ತುಂಡು ಶುಂಠಿಯನ್ನ ತುರಿದುಕೊಂಡಿರಿ)

1 ಚಮಚ ಅರಿಶಿನ ಪುಡಿ

2-3 ಹನಿ ನಿಂಬೆ ರಸ

5 ಗ್ರಾಂ ಕೊತ್ತಂಬರಿ ಸೊಪ್ಪು

3 ಗ್ರಾಂ ಜೀರಿಗೆ ಪುಡಿ

ರುಚಿಗೆ ತಕ್ಕಷ್ಟು ಕರಿಮೆಣಸು

ಉಪ್ಪು ರುಚಿಗೆ ತಕ್ಕಷ್ಟು

ದೇಸಿ ತುಪ್ಪ

ಬ್ರೆಡ್‌

ಆಲೂ ವೆಜಿ ಟೋಸ್ಟ್ ಮಾಡುವ ಸುಲಭ ವಿಧಾನ ಇಲ್ಲಿದೆ

ಮೊದಲು ಒಂದು ದೊಡ್ಡ ಆಲೂಗಡ್ಡೆಯನ್ನು ತೆಗೆದುಕೊಂಡು ತೊಳೆದುಕೊಳ್ಳಿ, ನಂತರ ಸಿಪ್ಪೆ ತೆಗೆದು ದಪ್ಪ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಈಗ ಒಂದು ಅಡುಗೆ ಪ್ಯಾನ್ ತೆಗೆದುಕೊಂಡು, ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ ಬೇಯಿಸಿ. ಸುಮಾರು 5 ಸೀಟಿ ಆದರೂ ಹೊಡೆಸುವ ಅಗತ್ಯ ಇದೆ.

ಆಲೂಗೆಡ್ಡೆ ಬೆಂದ ನಂತರ  ಒಂದು ಪ್ಯಾನ್‌ ತೆಗೆದುಕೊಳ್ಳಿ, ಅದಕ್ಕೆ ತುಪ್ಪ ಹಾಕಿ. ಈಗ ಅದಕ್ಕೆ ಆಲೂಗೆಡ್ಡೆಯನ್ನ ಹೋಳುಗಳಾಗಿ ಕತ್ತರಿಸಿ ಹಾಕಿ ಫ್ರೈ ಮಾಡಿ. ಈ ಆಲೂಗೆಡ್ಡೆಗಳು ಗೋಲ್ಡನ್‌ ಬ್ರೌನ್‌ ಬಣ್ಣಕ್ಕೆ ಬರುವ ತನಕ ಫ್ರೈ ಮಾಡಿ. ಮತ್ತೊಮ್ಮೆ ಅದಕ್ಕೆ ತುಪ್ಪ ಹಾಕಿ. ಈಗ ಇನ್ನೊಂದು ದೊಡ್ಡ ಬಟ್ಟಲಿನಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ. ಪೇಸ್ಟ್‌ ಆಗುವ ತನಕ ಮ್ಯಾಶ್ ಮಾಡಿ. ಈಗ, ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿಕೊಂಡ ಟೊಮೆಟೊ, ಹಸಿಮೆಣಸು, ಕೆಂಪು ಮೆಣಸು ಮತ್ತು ತುರಿದ ಶುಂಠಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ತಾಜಾ ನಿಂಬೆ ರಸವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಎಲ್ಲಾ ಮಸಾಲೆಗಳನ್ನ ಒಮ್ಮೆ ರುಚಿ ನೋಡಿ.

How to Make Crunchy Aloo Veggie Toast

ಈಗ ಪ್ಯಾನ್ ಮೇಲೆ ತುಪ್ಪ ಹಾಕಿ, ನಂತರ ಬೆಡ್‌ ತುಂಡುಗಳನ್ನ ಹಾಕಿ ಟೋಸ್ಟ್‌ ಫ್ರೈ ಮಾಡಿ, ನಂತರ ಅದರ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಮತ್ತು ಗೋಲ್ಡನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿದರೆ ಆಲೂ ವೆಜ್‌ ಟೋಸ್ಟ್‌ ಸವಿಯಲು ರೆಡಿ.

ಇದನ್ನೂ ಓದಿ: ಮಂಚೂರಿಯನ್‌ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಮೊಟ್ಟೆ ರೆಸಿಪಿ ಇಲ್ಲಿದೆ

Leave a Reply

Your email address will not be published. Required fields are marked *