NCERT: ಶಿಕ್ಷಕರಾಗಬೇಕು ಅಂತ ಆಸೆ ಇದೆಯಾ? 117 ಹುದ್ದೆಗೆ ಹೀಗೆ ಅಪ್ಲೈ ಮಾಡಿ

How to apply for NCERT Recruitment 2026

117 ಪ್ರಾಧ್ಯಾಪಕರು, ಉಪ ಗ್ರಂಥಪಾಲಕ ಹುದ್ದೆಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅರ್ಜಿ ಆಹ್ವಾನ ಮಾಡಿದ್ದು, ಭೋಪಾಲ್, ಭುವನೇಶ್ವರ, ಮೈಸೂರು, ಶಿಲ್ಲಾಂಗ್, ದೆಹಲಿ, ಅಜ್ಮೀರ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಸ್ಥೆಯ ಹೆಸರು : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ 
ಹುದ್ದೆಗಳ ಸಂಖ್ಯೆ: 117
ಉದ್ಯೋಗ ಸ್ಥಳ: ಭೋಪಾಲ್  , ಭುವನೇಶ್ವರ  , ಮೈಸೂರು , ಶಿಲ್ಲಾಂಗ್ , ದೆಹಲಿ, ಅಜ್ಮೀರ್
ಹುದ್ದೆಯ ಹೆಸರು: ಪ್ರಾಧ್ಯಾಪಕ, ಉಪ ಗ್ರಂಥಪಾಲಕ
ಸಂಬಳ: ತಿಂಗಳಿಗೆ ರೂ. 57,700 – 1,44,200/-

NCERT ಹುದ್ದೆಯ ವಿವರಗಳು

ಪೋಸ್ಟ್ ಹೆಸರುಪೋಸ್ಟ್‌ಗಳ ಸಂಖ್ಯೆವೇತನಶೈಕ್ಷಣಿಕ ಅರ್ಹತೆ
ಪ್ರಾಧ್ಯಾಪಕರು
19
ರೂ. 1,44,200/-ಪಿಎಚ್‌ಡಿ
ಅಸೋಸಿಯೇಟ್ ಪ್ರೊಫೆಸರ್
50
ರೂ. 1,31,400/-ಸ್ನಾತಕೋತ್ತರ ಪದವಿ , ಪಿಎಚ್‌ಡಿ ಪದವಿ
ಸಹಾಯಕ ಪ್ರಾಧ್ಯಾಪಕರು45ರೂ. 57,700/-ಸ್ನಾತಕೋತ್ತರ ಪದವಿ
ಉಪ ಗ್ರಂಥಪಾಲಕ1ರೂ. 1,31,400/-ಸ್ನಾತಕೋತ್ತರ ಪದವಿ, ಪಿಎಚ್‌ಡಿ
ಸಹಾಯಕ ಗ್ರಂಥಪಾಲಕ2ರೂ. 57,700/-ಸ್ನಾತಕೋತ್ತರ ಪದವಿ

NCERT ಶೈಕ್ಷಣಿಕ ಅರ್ಹತೆಯ ವಿವರಗಳು

ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ:

ಯುಆರ್/ ಒಬಿಸಿ/ ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ. 1000/-

SC/ ST/ PWD ಅಭ್ಯರ್ಥಿಗಳು: ಇಲ್ಲ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ, ಸಂದರ್ಶನ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31-01-2026

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-2-2026

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: ncert.nic.in

ಇದನ್ನೂ ಓದಿ: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಬರೋಬ್ಬರಿ 2 ಲಕ್ಷ ಸಂಬಳ

Leave a Reply

Your email address will not be published. Required fields are marked *