AIISH Recruitment: ಬಿಎಸ್‌ಸಿ ಆಗಿದೆಯಾ? ಕೇಂದ್ರ ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೈ ಮಾಡಿ

How to apply for AIISH Recruitment Mysore

ಕೇಂದ್ರ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಅದರಲ್ಲೂ ತಮ್ಮದೇ ರಾಜ್ಯದಲ್ಲಿ ಇದ್ದುಕೊಂಡು ಕೇಂದ್ರ ಸರ್ಕಾರಿ ಕೆಲಸ ಇದ್ದರಂತೂ ಅದಕ್ಕಿಂತ ಬೇರೆ ಸಂತೋಷ ಯಾವುದೂ ಇಲ್ಲ. ಇದೀಗ ಅದೇ ರೀತಿಯ ಅವಕಾಶವೊಂದು ಇದ್ದು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಮೈಸೂರು (AIISH Recruitment) ಖಾಲಿ ಇರುವ  3 ಆಡಿಯಾಲಜಿಸ್ಟ್, ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಸ್ಥೆಯ ಹೆಸರು : ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಮೈಸೂರು
ಹುದ್ದೆಗಳ ಸಂಖ್ಯೆ: 3
ಉದ್ಯೋಗ ಸ್ಥಳ: ಮೈಸೂರು
ಹುದ್ದೆ ಹೆಸರು: ಆಡಿಯಾಲಜಿಸ್ಟ್, ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್
ಸಂಬಳ: ತಿಂಗಳಿಗೆ ರೂ. 40,000/-

ಹುದ್ದೆಯ ಹೆಸರುಹುದ್ದೆಯ ಸಂಖ್ಯೆಶೈಕ್ಷಣಿಕ ಅರ್ಹತೆವಯೋಮಿತಿ
ಶ್ರವಣಶಾಸ್ತ್ರಜ್ಞ1ಬಿಎಸ್‌ಸಿಗರಿಷ್ಠ 45 ವರ್ಷ
ವಾಕ್ ಭಾಷಾ ರೋಗಶಾಸ್ತ್ರಜ್ಞ2ಬಿಎಸ್‌ಸಿಗರಿಷ್ಠ 45 ವರ್ಷ

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ & ಹಿಯರಿಂಗ್ ಸಂಸ್ಥೆಯ ಕಚೇರಿಗೆ ಅರ್ಜಿ ಕಳುಹಿಸಬೇಕು

ಅರ್ಜಿ ಕಳುಹಿಸುವ ವಿಳಾಸ

ಮುಖ್ಯ ಆಡಳಿತಾಧಿಕಾರಿಗಳ ಕಚೇರಿ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ & ಹಿಯರಿಂಗ್, ಮಾನಸಗಂಗೋತ್ರಿ, ಮೈಸೂರು – 570006

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08-01-2026

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-1-2026

ಅಧಿಕೃತ ವೆಬ್‌ಸೈಟ್: http://aiishmysore.in

ಇದನ್ನೂ ಓದಿ: ಬರೋಬ್ಬರಿ 29 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸರ್ಕಾರಿ ಕೆಲಸಕ್ಕೆ ಇಲ್ಲಿದೆ ಅವಕಾಶ

Leave a Reply

Your email address will not be published. Required fields are marked *