Digestion Problem: ಜೀರ್ಣಕ್ರಿಯೆ ಸಮಸ್ಯೆನಾ? ಈ ಮನೆಮದ್ದು ಟ್ರೈ ಮಾಡಿ

home remedies for Digestion Problem

ನಾವು ತಿನ್ನುವುದು ಕೆಲವೊಂದು ಆಹಾರಗಳು ಆರೋಗ್ಯವನ್ನ ಹಾಳು ಮಾಡುತ್ತದೆ. ಈಗಿನ ಫಾಸ್ಟ್‌ಫುಡ್‌ಗಳು ಜೀರ್ಣಕ್ರಿಯೆ ಸಮಸ್ಯೆಯನ್ನ ಸೃಷ್ಟಿ ಮಾಡುತ್ತದೆ.  ಒಮ್ಮೆ ಜೀರ್ಣಕ್ರಿಯೆ ಸಮಸ್ಯೆ ಆರಂಭ ಆದರೆ ಅದರಿಂದ ಪರಿಹಾರ ಪಡೆಯುವುದು ಸುಲಭವಲ್ಲ. ಅದರಲ್ಲೂ ಗ್ಯಾಸ್ಟ್ರಿಕ್‌ ಸಮಸ್ಯೆಯಂತೂ ಸರಿ ಹೋಯಿತು ಎನ್ನುವಾಗ ಮತ್ತೆ ಮತ್ತೆ ಬರುತ್ತದೆ. ಆದರೆ ಮನೆಯಲ್ಲಿ ಇದಕ್ಕೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಹೌದು, ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನ ಬಳಕೆ ಮಾಡಿಕೊಂಡು ಜೀರ್ಣಕ್ರಿಯೆ (Digestion Problem) ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

ಅಜ್ವೈನ್: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಈ ಅಜ್ವೈನ್‌ ಬೀಜಗಳು ಇರುತ್ತದೆ. ಇದನ್ನ ಅಡುಗೆಯಲ್ಲಿ ಬಳಕೆ ಸಹ ಮಾಡಲಾಗುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತ. ಇದುಅತ್ಯಂತ ಶಕ್ತಿಶಾಲಿ ಜೀರ್ಣಕಾರಿ ಮಸಾಲೆಯಾಗಿರಬಹುದು. ಇದು ಥೈಮೋಲ್ ಅನ್ನು ಹೊಂದಿರುತ್ತದೆ. ಇದನ್ನ ಸೇವನೆ ಮಾಡುವುದರಿಂದ ಕೇವಲ 10 ನಿಮಿಷದಲ್ಲಿ ಪರಿಹಾರ ಪಡೆಯಬಹುದಾಗಿದೆ.

ಜೀರಿಗೆ: ಜೀರಿಗೆ ಸಹ ಬಹಳ ಸಾಮಾನ್ಯವಾಗಿ ಸಿಗುವ ಒಂದು ಮಸಾಲೆ ಪದಾರ್ಥವಾಗಿದೆ. ಇದರಲ್ಲಿ ಕ್ಯುಮಿನಲ್ಡಿಹೈಡ್ ಇರುತ್ತದೆ. ಜೀರಿಗೆ ಬೀಜಗಳನ್ನು ಒಣ ಬಾಣಲೆಯಲ್ಲಿ ಪರಿಮಳ ಬರುವವರೆಗೆ ಲಘುವಾಗಿ ಹುರಿಯಿರಿ, ನಂತರ ಅದನ್ನ ಬಾಯಿಗೆ ಹಾಕಿಕೊಂಡು ಜಗಿಯುತ್ತಿರಿ. ಇದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಸೋಂಪಿನಕಾಳು: ಬಹಳ ಪರಿಮಳ ಬೀರುವ ಈ ಸೋಂಪಿನ ಕಾಳು ಅನೇಕ ಆರೋಗ್ಯ ಲಾಭಗಳನ್ನ ಹೊಂದಿದೆ, ಇದನ್ನ ಪ್ರತಿದಿನ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನ ಪಡೆಯಬಹುದು. ಇದರಲ್ಲಿರುವ ಅನೆಥೋಲ್ ಹೊಟ್ಟೆಯಲ್ಲಿ ಇರುವ ಗ್ಯಾಸ್‌ ಅನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಕಾಶಿ ಸ್ಟೈಲ್‌ ಟಮಾಟರ್‌ ಚಾಟ್‌ ಮನೆಯಲ್ಲಿ ಮಾಡಿ, ಇಲ್ಲಿದೆ ರೆಸಿಪಿ

Leave a Reply

Your email address will not be published. Required fields are marked *