ಚಳಿಗಾಲ ಆರಂಭ ಆಯ್ತು ಎಂದರೆ ಸಾಕು ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆಗಳು ಸಹ ಆರಂಭ ಆಗುತ್ತದೆ. ಅದರ ಜೊತೆಗೆ ಕೂದಲಿನ ವಿಚಾರವಾಗಿ ಈ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಸಮಯದಲ್ಲಿ ನೆತ್ತಿ ಶುಷ್ಕತೆ ಉಂಟಾಗುತ್ತದೆ. ಅದಲ್ಲದೇ, ತಲೆಹೊಟ್ಟಿನ ಸಮಸ್ಯೆ ಸಹ ಆರಂಭ ಆಗುತ್ತದೆ. ಇದಕ್ಕೆಲ್ಲಾ ಮನೆಯಲ್ಲಿಯೇ ಬಹಳ ಸುಲಭವಾಗಿ ಪರಿಹಾರ ಪಡೆಯಬಹುದಾಗಿದೆ. ನಿಮಗೂ ಸಹ ತಲೆಹೊಟ್ಟಿನ (Home Remedies For Dandruff) ಸಮಸ್ಯೆ ಕಾಡುತ್ತಿದ್ದರೆ, ಅದಕ್ಕೆ ಇಲ್ಲಿದೆ ಪರಿಹಾರ ಇಲ್ಲಿದೆ.
ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣು:
ಚಳಿಗಾಲದಲ್ಲಿ ತಲೆಹೊಟ್ಟು ನಿವಾರಣೆಗೆ ಬಹಳ ಒಳ್ಳೆಯ ಪರಿಹಾರ ಎಂದರೆ ತೆಂಗಿನ ಎಣ್ಣೆ ಹಾಗೂ ನಿಂಬೆಹಣ್ಣು. ಇದನ್ನ ಬಳಕೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ. ತೆಂಗಿನ ಎಣ್ಣೆಯಲ್ಲಿರುವ ತೇವಾಂಶ ನೆತ್ತಿಯ ಶುಷ್ಕತೆಯನ್ನ ಹೋಗಲಾಡಿಸುತ್ತದೆ. ಅದರ ಜೊತೆಗೆ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ತಲೆಹೊಟ್ಟು ಸೃಷ್ಟಿ ಮಾಡುವ ಅಂಶಗಳನ್ನ ನಿಯಂತ್ರಣ ಮಾಡುತ್ತದೆ.
ಬಳಕೆ ಮಾಡುವ ವಿಧಾನ
ಎರಡು ಟೀ ಚಮಚ ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ಅರ್ಧ ಟೀ ಚಮಚ ತಾಜಾ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನ ನೆತ್ತಿನ ಮೇಲೆ ಹಚ್ಚಿ. ಕೂದಲಿನ ಬುಡಕ್ಕೆ ಎಣ್ಣೆ ತಲುಪುವ ವರೆಗೂ ಇದನ್ನ ಮಸಾಜ್ ಮಾಡಿ. 5 ರಿಂದ 7 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ನಾನ ಮಾಡಿ.
ಇದನ್ನೂ ಓದಿ: ಚಳಿಗಾಲದಲ್ಲಿ ಕೆಮ್ಮು ಕಾಡ್ತಿದೆಯಾ? ಈ ಸಿಂಪಲ್ ಕೆಲಸ ಮಾಡಿ
