ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಸಿರು ಬಟಾಣಿಯನ್ನ ಅನೇಕ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಬಹುದು. ಇದನ್ನ ಬಳಸಿ ಬಹಳಷ್ಟು ರುಚಿಕರವಾದ ಆಹಾರವನ್ನ ತಯಾರಿಸಬಹುದು. ಇದರ ರುಚಿ ಸಹ ಬಹಳ ವಿಭಿನ್ನವಾಗಿರುತ್ತದೆ. ಅನೇಕ ಜನರಿಗೆ ಈ ಬಟಾಣಿಯಲ್ಲಿ (Green Peas) ಇರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಈ ಬಟಾಣಿಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಆ ಆರೋಗ್ಯ ಪ್ರಯೋಜನಗಳು ಎಂಬುದು ಇಲ್ಲಿದೆ.
ಬಟಾಣಿಗಳು (Green Peas) ಪೋಷಕಾಂಶಗಳಿಂದ ಸಮೃದ್ಧವಾಗಿವೆ
ಬಟಾಣಿಗಳು ಪ್ರೋಟೀನ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ, ಇದು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚು ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬಟಾಣಿಗಳಲ್ಲಿ ಕಬ್ಬಿಣ, ಸತು, ಮ್ಯಾಂಗನೀಸ್ ಮತ್ತು ತಾಮ್ರ ಇದ್ದು, ಇವು ದೇಹದ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡುತ್ತದೆ. ಇದರಿಂದ ಅನೇಕ ರೋಗಗಳು ಬರದಂತೆ ತಡೆಯುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಇರುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ.
ಮುಖ್ಯವಾಗಿ ಬಟಾಣಿಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೆಯೇ, ಇದರಲ್ಲಿ ಕ್ಯಾಲ್ಸಿಯಂ ಮತ್ತು ಸತು ಇರುವುದರಿಂದ ಮೂಳೆಗಳನ್ನ ಸಹ ಬಲಪಡಿಸುತ್ತದೆ.
ಇದನ್ನೂ ಓದಿ: ಆಲೂಗೆಡ್ಡೆ ಗ್ಯಾಸ್ ಅಂತ ದೂರ ಹೋಗಬೇಡಿ, ಇಲ್ಲಿದೆ ಅದರ ಪ್ರಯೋಜನಗಳು
