Banana: ದಿನಕ್ಕೊಂದು ಬಾಳೆಹಣ್ಣು ತಿನ್ನಿ, ನೂರಾರು ಲಾಭ ಪಡೆಯಿರಿ

Health benefits of Banana fruits

ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ನಾವು ಒಳ್ಳೆಯ ಆಹಾರವನ್ನ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಅದರಲ್ಲೂ ಹೆಚ್ಚಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡುವುದರಿಂದ ಅನೇಕ ಲಾಭಗಳನ್ನ ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಂದು ಹಣ್ಣುಗಳು ಒಂದೊಂದು ರೀತಿಯ ಪ್ರಯೋಜನಗಳನ್ನ ನೀಡುತ್ತದೆ. ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಈ ಬಾಳೆಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನ ಕೊಡುತ್ತದೆ. ಇದು ಜೀವಸತ್ವಗಳು, ಪ್ರೋಟೀನ್ಗಳು ಮತ್ತು ಖನಿಜಗಳು ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮುಖ್ಯವಾಗಿ ಇದು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಸಹ ಹೊಂದಿರುತ್ತವೆ. ಹಾಗಾದ್ರೆ ಈ ಬಾಳೆಹಣ್ಣು (Banana) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭ ಸಿಗುತ್ತದೆ ಎಂಬುದು ಇಲ್ಲಿದೆ.

ಬಾಳೆಹಣ್ಣಿನ (Banana) ಆರೋಗ್ಯ ಪ್ರಯೋಜನಗಳು

ಈ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇರುವುದರಿಂದ, ವ್ಯಾಯಾಮದ ನಂತರ ಒಂದು ಹಣ್ಣನ್ನ ತಿನ್ನಬೇಕು.

ಮುಖ್ಯವಾಗಿ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಇದ್ದು, ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನೆನಪಿನ ಶಕ್ತಿ ಡಬಲ್‌ ಆಗುತ್ತದೆ. ಹಾಗೆಯೇ, ಬಾಳೆಹಣ್ಣು ತೂಕ ನಿಯಂತ್ರಣ ಮಾಡಲು ಸಹ ಸಹಾಯ ಮಾಡುತ್ತದೆ.

Health benefits of Banana fruits

ಬಾಳೆಹಣ್ಣು ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.ಬಾಳೆಹಣ್ಣಿನಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಇದು ಸಾಮಾನ್ಯ ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಒತ್ತಡವನ್ನ ನಿವಾರಣೆ ಮಾಡಲು ಸಹ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.  ಬಾಳೆಹಣ್ಣು ಹೃದಯ ಸಂಬಂಧಿ ಕಾಯಿಲೆಗಳಿಂದ ಸಹ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: ಸೂಪರ್‌ ಹೆಲ್ದಿ ಪನೀರ್‌ ಶೇಜ್ವಾನ್‌ ಬ್ರೆಡ್‌ರೋಲ್‌ ರೆಸಿಪಿ

Leave a Reply

Your email address will not be published. Required fields are marked *