Dhokla Recipe: ಮನೆಯಲ್ಲಿ ಸುಲಭವಾಗಿ ಮಾಡಿ ಗುಜರಾತಿ ಡೋಕ್ಲಾ

evening snacks gujarati dhokla recipe

ಗುಜರಾತಿ ಡೋಕ್ಲಾ ಅಂದ್ರೆ ಅನೇಕ ಜನರಿಗೆ ತುಂಬಾ ಇಷ್ಟ. ಆದರೆ ಇದನ್ನ ಮನೆಯಲ್ಲಿ ಮಾಡಲು ಬರದೇ ಹೊರಗೆ ಹುಡುಕಿಕೊಂಡು ಹೋಗಿ ತಿನ್ನುತ್ತಾರೆ. ಆದರೆ ಈ ಡೋಕ್ಲಾವನ್ನ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದು. ನಿಮಗೂ ಸಹ ಡೋಕ್ಲಾ (Dhokla Recipe) ಎಂದರೆ ತುಂಬಾ ಇಷ್ಟ ಎಂದರೆ ಇಲ್ಲಿದೆ ಸೂಪರ್‌ ಈಸಿ ರೆಸಿಪಿ.

ಡೋಕ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು

ಹಿಟ್ಟು ತಯಾರಿಸಲು

ಅರ್ಧ ಕಪ್‌ ಕಡಲೇ ಹಿಟ್ಟು

1 ಚಮಚ ರವೆ

1 ಟೀ ಸ್ಪೂನ್‌ ಶುಂಠಿ ಪೇಸ್ಟ್‌

1 ಚಮಚ ಹಸಿ ಮೆಣಸಿನಕಾಯಿ ಪೇಸ್ಟ್

1 ಚಮಚ ಸಕ್ಕರೆ

1/2 ಚಮಚ ಅರಿಶಿನ ಪುಡಿ

1 ಚಮಚ  ನಿಂಬೆ ರಸ

ರುಚಿಕೆ ತಕ್ಕಷ್ಟು ಉಪ್ಪು

ಅರ್ಧ ಚಮಚ ENO ಅಥವಾ ಅಡುಗೆ ಸೋಡಾ

ನೀರು

1 ½ ಚಮಚ ಎಣ್ಣೆ

1 ಚಮಚ ಸಾಸಿವೆ

1 ಚಮಚ ಎಳ್ಳು –

2 ಹಸಿ ಮೆಣಸಿನಕಾಯಿ

ಇಂಗು

ಕರಿಬೇವು

ಡೋಕ್ಲಾ ಮಾಡುವ ಸುಲಭ ವಿಧಾನ ಇಲ್ಲಿದೆ

ಹಿಟ್ಟು ತಯಾರಿಸುವ ವಿಧಾನ

ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಅರ್ಧ ಕಪ್, 1‌ ಚಮಚ ರವೆ, ಸ್ವಲ್ಪ ಅರಿಶಿನ, ಉಪ್ಪು, ಸಕ್ಕರೆ, ಶುಂಠಿ ಮೆಣಸಿನಕಾಯಿ ಪೇಸ್ಟ್ ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪನ್ನ ರುಚಿಗೆ ತಕ್ಕಷ್ಟು ಮಾತ್ರ ಹಾಕಿ. ಹಾಗೆಯೇ, ನಿಧಾನ ನೀರನ್ನ ಹಾಕುತ್ತಾ ಅದನ್ನ ಕಲಸಲು ಆರಂಭ ಮಾಡಿ. ಯಾವುದೇ ಕಾರಣಕ್ಕೂ ಹಿಟ್ಟು ಉಂಡೆ ಉಂಡೆ ತರ ಆಗದಂತೆ ನೋಡಿಕೊಳ್ಳಿ. ಈಗ ಅದಕ್ಕೆ ENO ಪೌಡರ್‌ ಹಾಕಿ. ಆಗ ಹಿಟ್ಟು ಸ್ವಲ್ಪ ನೊರೆ ನೊರೆ ಆಗುತ್ತದೆ. ಇದರಿಂದ ಡೋಕ್ಲಾ ಉಬ್ಬಿಕೊಳ್ಳಲು ಸಹಾಯವಾಗುತ್ತದೆ. ಈಗ ಒಂದು ಸ್ಟೀಲ್ ಪ್ಲೇಟ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ. ನಂತರ ತಯಾರಿಸಿಕೊಂಡಿರುವ ಹಿಟ್ಟನ್ನ ಹಾಕಿ. ಇದಕ್ಕೂ ಮೊದಲು ಕುಕ್ಕರ್‌ಗೆ ಸ್ವಲ್ಪ ನೀರನ್ನ ಹಾಕಿ ಕಾಯಿಸಿಕೊಳ್ಳಿ. ನಂತರ ಈ ಪ್ಲೇಟ್‌ ಅನ್ನು ಒಳಗೆ ಇಟ್ಟು ಸ್ಟೀಮ್‌ ಮಾಡಿ. ಸುಮಾರು 15–18 ನಿಮಿಷಗಳ ಕಾಲ ಸ್ಟೀಮ್ ಮಾಡಿ. ನಂತರ ಡೋಕ್ಲಾವನ್ನ  ಸ್ವಲ್ಪ ತಣ್ಣಗಾಗಲು ಬಿಡಿ. ಅದು ತಣ್ಣಗೆ ಆಗುತ್ತಿರುವಾಗ ಅಥವಾ ಸ್ಟೀಮ್‌ ಆಗುವಾಗ ಸಕ್ಕರೆ ಹಾಗೂ ನಿಂಬೆ ರಸವನ್ನ ಕುದಿಸಿಕೊಂಡು ತಯಾರಿಸಿಕೊಳ್ಳಿ. ಹಾಗೆಯೇ, ಸಣ್ಣ ಬಾಣಲೆಯಲ್ಲಿ ಎಣ್ಣ ಹಾಕಿ, ಅದನ್ನ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಚಿಟಿಚಿಟಿ ಅಂತ ಅನಿಸಿ. ನಂತರ ಅದಕ್ಕೆ ಎಳ್ಳು, ಹಸಿರು ಮೆಣಸಿನಕಾಯಿ, ಹಿಂಗ್ ಮತ್ತು ಕರಿಬೇವು ಸೇರಿಸಿ. ಈಗ ತಣ್ಣಗಾಗಿರುವ ಡೋಕ್ಲಾ ಮೇಲೆ ಸಕ್ಕರೆ ನೀರು ಹಾಕಿ. ಅದು ಹೀರಿಕೊಂಡ ನಂತರ ತಯಾರಿಸಿಕೊಂಡಿರುವ ಒಗ್ಗರಣೆ ಹಾಕಿ, ಚೌಕಾಕಾರದಲ್ಲಿ ಕತ್ತರಿಸಿದರೆ ಡೋಕ್ಲಾ ಸವಿಯಲು ರೆಡಿ.

ಇದನ್ನೂ ಓದಿ: ಚಳಿಗಾಲದಲ್ಲಿ ಈ ಹಣ್ಣುಗಳನ್ನ ಮಿಸ್‌ ಮಾಡದೇ ತಿನ್ನಿ

Leave a Reply

Your email address will not be published. Required fields are marked *