ಪ್ಯಾನ್‌ಕೇಕ್ ಮಕ್ಕಳ ಫೇವರೇಟ್ ಎನ್ನಬಹುದು, ಇದನ್ನ ಬೆಳಗಿನ ತಿಂಡಿಯಿಂದ ಹಿಡಿದು ಮೂರು ಹೊತ್ತು ಮಾಡಿಕೊಟ್ಟರೆ ಸದ್ದಿಲ್ಲದೇ ತಿನ್ನುತ್ತಾರೆ. ಅನೇಕ ಬಾರಿ ಪ್ಯಾನ್‌ಕೇಕ್ ಮಾಡಲು ಮೊಟ್ಟೆ ಬಳಕೆ ಮಾಡಬೇಕಾಗುತ್ತದೆ. ಆದರೆ ಮನೆಯಲ್ಲಿ ಬಹಳ ಸುಲಭವಾಗಿ ಮೊಟ್ಟೆ ಇಲ್ಲದೇ ಬಾಳೆಹಣ್ಣಿನ ಪ್ಯಾನ್‌ಕೇಕ್ (Pancake) ಮಾಡಬಹುದು. ಅದರ ಸುಲಭ ರೆಸಿಪಿ ಇಲ್ಲಿದೆ.
ಬಾಳೆಹಣ್ಣು ಪ್ಯಾನ್‌ಕೇಕ್ ಮಾಡಲು ಬೇಕಾಗುವ ಪದಾರ್ಥಗಳು
1 ಕಪ್ ಎಲ್ಲಾ ಕಡಲೇ ಹಿಟ್ಟು
1 ಚಮಚ ಸಕ್ಕರೆ
1 ಟೀಸ್ಪೂನ್ ಬೇಕಿಂಗ್ ಪೌಡರ್
ಒಂದು ಚಿಟಿಕೆ ಉಪ್ಪು
1 ಮಾಗಿದ ಬಾಳೆಹಣ್ಣು, (ನುಣ್ಣಗೆ ಹಿಸುಕಿಕೊಳ್ಳಿ)
1 ಕಪ್ ಹಾಲು
2 ಚಮಚ ಬೆಣ್ಣೆ ಅಥವಾ ಎಣ್ಣೆ
ಬಾಳೆಹಣ್ಣಿನ ಪ್ಯಾನ್‌ಕೇಕ್ ಮಾಡುವ ಸುಲಭ ವಿಧಾನ ಇಲ್ಲಿದೆ
ಮೊದಲು ದೊಡ್ಡ ಬಟ್ಟಲಿನಲ್ಲಿ, ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ. ಚೆನ್ನಾಗಿ ಈ ಎಲ್ಲಾ ಪದಾರ್ಥಗಳನ್ನ ಮಿಶ್ರಣ ಮಾಡಿ. ನಂತರ ಬೇರೆ ಬಟ್ಟಲಿನಲ್ಲಿ, ಮಾಗಿದ ಬಾಳೆಹಣ್ಣನ್ನು ನಯವಾಗುವ ತನಕ ಮ್ಯಾಶ್ ಮಾಡಿ. ಈಗ ಈ ಮ್ಯಾಶ್ ಮಾಡಿದ ಬಾಳೆಹಣ್ಣನ್ನ ಹಿಟ್ಟು, ಸಕ್ಕರೆ ಹಾಗೂ ಬೇಕಿಂಗ್ ಪೌಡರ್ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಹಾಲು ಮತ್ತು ಕರಗಿದ ಬೆಣ್ಣೆ ಅಥವಾ ಎಣ್ಣೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣವಾಗುವವರೆಗೆ ಕಲಸಿ.
ಈಗ ಮಧ್ಯಮ ಉರಿಯ ಮೇಲೆ ಗ್ರಿಡಲ್ ಅಥವಾ ನಾನ್-ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ. ಬ್ಯಾಟರ್ ಅನ್ನು ಬಿಸಿಯಾದ ಮೇಲೆ ಪ್ಯಾನ್‌ಗೆ ಹಾಕಿ, ದೋಸೆಯ ರೀತಿ ಹಾಕಿ. ನಂತರ ಅದನ್ನ ಎರಡೂ ಬದಿಗೆ ಚೆನ್ನಾಗಿ ಬೇಯಿಸಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದ ನಂತರ ಅದನ್ನ ತೆಗೆದು ಮೇಲೆ ಚಾಕೊಲೇಟ್ ಸಿರಪ್ ಹಾಕಿ ಸವಿಯಿರಿ.
ಇದನ್ನೂ ಓದಿ: ಸಿಂಪಲ್ ಆಗಿ ಗಲೌಟಿ ಕಬಾಬ್ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
