ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ‘ದಿ ಡೆವಿಲ್’ (The Devil Movie) ಸಿನಿಮಾ ರಿಲೀಸ್ ಆಗಿದೆ. ಕನ್ನಡ ಸಿನಿಮಾ ರಂಗದ ಮತ್ತೊಂದು ಹಿಟ್ ಸಿನಿಮಾ ಎನಿಸಿಕೊಳ್ಳುವತ್ತ ಸಾಗುತ್ತಿದೆ. ಹೀಗಿರುವಾಗ ನಟ ದರ್ಶನ್ ಅವರ ಪ್ರೀತಿಯ ಮಡದಿ ವಿಜಯಲಕ್ಷ್ಮಿ (Vijayalakshmi Darshan) ಅವರು ಸಂದರ್ಶನ್ ಒಂದನ್ನ ನೀಡಿದ್ದು, ಸದ್ಯ ಅವರ ಕೆಲ ಮಾತುಗಳು ವೈರಲ್ ಆಗುತ್ತಿದೆ.
13.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾ
ಬಾಕ್ಸ್ ಆಫೀಸ್ ಮಾಹಿತಿ ಪ್ರಕಾರ, ಈ ಸಿನಿಮಾ ಮೊದಲ ದಿನವೇ 13.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ಈ ಸಂತೋಷದ ಸಮಯದಲ್ಲಿ ನಟ ದರ್ಶನ್ ಮಾತ್ರ ತಮ್ಮ ಸೆಲೆಬ್ರಿಟಿಗಳ ಜೊತೆ ಇಲ್ಲ. ಇದು ಅಭಿಮಾನಿಗಳಿಗೆ ನಿಜಕ್ಕೂ ಬೇಸರದ ಸಂಗತಿಯಾಗಿದೆ. ದರ್ಶನ್ ಬದಲಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಿನಿಮಾದ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದು, ಈಗ ಸಿನಿಮಾ ನಾಯಕ ನಟಿ ರಚನಾ ಅವರಿಗೆ ಸಂದರ್ಶನವೊಂದನ್ನ ಕೊಟ್ಟಿದ್ದಾರೆ, ಅದರಲ್ಲಿ ಅವರು ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಅವರು ನಟ ದರ್ಶನ್ ಅವರಿಗೆ ಡೆವಿಲ್ ಸಿನಿಮಾ ಎಷ್ಟು ಮುಖ್ಯ ಎಂಬುದನ್ನ ಹೇಳಿಕೊಂಡಿದ್ದಾರೆ. ಅದರ ಜೊತೆಗೆ ಸಿನಿಮಾದ ಯಶಸ್ಸಿನ ಬಗ್ಗೆ ಸಹ ಅವರು ಮಾತನಾಡಿದ್ದು, ದರ್ಶನ್ ಅವರು ಈ ಸಮಯದಲ್ಲಿ ಇಲ್ಲದಿದ್ದರೂ ಸಹ ಅವರ ಅಭಿಮಾನಿಗಳು ಸಿನಿಮಾವನ್ನ ಜೊತೆಗೆ ಅವರನ್ನ ಯಾವ ರೀತಿ ತಲೆಯ ಮೇಲೆ ಹೊತ್ತುಕೊಂಡು ಮೆರುಸುತ್ತಿದ್ದಾರೆ ಎಂಬುದರ ಬಗ್ಗೆ ಸಂತೋಷವನ್ನ ವ್ಯಕ್ತಪಡಿಸಿದ್ದಾರೆ.
ಅವಿದ್ಯಾವಂತರು ಎನ್ನುವವರಿಗೆ ಟಾಂಗ್ ಕೊಟ್ಟ ವಿಜಯಲಕ್ಷ್ಮಿ
ಇನ್ನು ದರ್ಶನ್ ಅಭಿಮಾನಿಗಳು ಮಹಿಳೆಯರಿಗೆ ಗೌರವ ಕೊಡುವುದಿಲ್ಲ, ಅವರನ್ನ ಅವಿದ್ಯಾವಂತರು ಎಂದೆಲ್ಲಾ ಅನೇಕರು ಕರೆಯುತ್ತಾರೆ ಎಂದು ನಟಿ ರಚನಾ ಅವರು ಕೇಳಿದಾಗ, ಅದಕ್ಕೆ ವಿಜಯಲಕ್ಷ್ಮಿ ಅವರು, ದರ್ಶನ್ ಅವರ ಅಭಿಮಾನಿಗಳಿಗೆ ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ಅಲ್ಲದೇ, ನಮ್ಮ ಸೆಲೆಬ್ರಿಟಿಸ್ ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಎಂದು ಕೇಳೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2017ರ ನಟಿ ಅಪಹರಣ ಪ್ರಕರಣ, ಸಾಕ್ಷಿ ಅಭಾವ ಹಿನ್ನೆಲೆ ನಟ ದಿಲೀಪ್ ಖುಲಾಸೆ
