Dahi Vada Shorts: ಗೆಸ್ಟ್‌ ಬರ್ತಿದ್ದಾರಾ? ದಹಿ ವಡಾ ಶಾಟ್ಸ್‌ ಮಾಡಿ

Dahi Vada Shorts evening snacks recipe

ದಹಿ ವಡಾ ಅನೇಕ ಜನರಿಗೆ ಇದು ತುಂಬಾ ಇಷ್ಟ. ಮನೆಯಲ್ಲಿ ಇದನ್ನ ಮಾಡುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಆದರೆ ಇದನ್ನ ಮನೆಯಲ್ಲಿ ಆಗಾಗ ಮಾಡುತ್ತಿದ್ದರೆ ಎಲ್ಲರಿಗೂ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಇದನ್ನ ಒಂದು ಬೌಲ್‌ನಲ್ಲಿ ಹಾಕಿ ಕೊಡಲಾಗುತ್ತದೆ. ಆದರೆ ಯಾವಾಗಲಾದರೂ ದಹಿ ವಡಾ ಶಾಟ್ಸ್‌ ಟ್ರೈ ಮಾಡಿದ್ದೀರಾ? ಇದು ಏನು ಬಹಳ ವಿಶೇಷ ಅಲ್ಲ, ಇದನ್ನ ಮಾಡೋದು ತುಂಬಾ ಸುಲಭ. ಹಾಗೆಯೇ, ಮನೆಗೆ ಅತಿಥಿಗಳು ಬಂದಾಗ ಇದನ್ನ ಕೊಟ್ಟರೆ ಸಖತ್‌ ಆಗಿರುತ್ತದೆ. ಹಾಗಾದ್ರೆ ಈ ದಹಿ ವಡಾ ಶಾಟ್ಸ್‌ (Dahi Vada Shorts) ಮಾಡೋದು ಹೇಗೆ? ಇಲ್ಲಿದೆ ಸುಲಭ ರೆಸಿಪಿ.

ದಹಿ ವಡಾ ಶಾಟ್ಸ್‌ ಮಾಡಲು ಬೇಕಾದ ಪದಾರ್ಥಗಳು

ವಡೆ ಮಾಡಲು ಏನೆಲ್ಲಾ ಬೇಕು?

1 ಕಪ್ ನೆನೆಸಿದ ಉದ್ದಿನ ಬೇಳೆ

1/2 ಕಪ್ ನೆನೆಸಿದ ಸಿಹಿಗೆಣಸು

1/2 ಟೀಸ್ಪೂನ್ ಇಂಗು

1 ಚಮಚ ಕೆಂಪು ಮೆಣಸಿನ ಪುಡಿ

1 ಚಮಚ ಜೀರಿಗೆ ಪುಡಿ

ಕಪ್ಪು ಉಪ್ಪು

ಎಣ್ಣೆ

1 ದೊಡ್ಡ ಬಟ್ಟಲು ಬೆಚ್ಚಗಿನ ನೀರು

ದಹಿ ತಯಾರಿಸಲು

1 ಕಪ್ ಮೊಸರು

1 ಟೀಸ್ಪೂನ್ ಜೀರಿಗೆ ಪುಡಿ

1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

     1 ಚಮಚ ಸಕ್ಕರೆ

ಕಪ್ಪು ಉಪ್ಪು

ಹುಣಸೆ ಚಟ್ನಿ ಮಾಡಲು ಏನೆಲ್ಲಾ ಬEಕು?

1 ಕಪ್ ಹುಣಸೆಹಣ್ಣು (ರಾತ್ರಿಯಿಡೀ ನೆನೆಸಿಡಿ)

3 ಕಪ್ ನೀರು

1 ಟೀಸ್ಪೂನ್ ಶುಂಠಿ ಪುಡಿ

1/2 ಟೀಸ್ಪೂನ್ ಹಿಂಗ್

1 ಚಮಚ ಜೀರಿಗೆ ಪುಡಿ

1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

ಬೆಲ್ಲ

ಅಲಂಕಾರ ಮಾಡಲು

ಶುಂಠಿ (ಸಣ್ಣಗೆ ಕತ್ತರಿಸಿಕೊಳ್ಳಿ)

ಜೀರಿಗೆ ಪುಡಿ

ದಾಳಿಂಬೆ ಹಣ್ಣು

ದಹಿ ವಡೆ ಶಾಟ್ಸ್ ಮಾಡುವ ಸುಲಭ ವಿಧಾನ ಹೀಗಿದೆ

ಮೊದಲು ಉದ್ದಿನ ಬೇಳೆ ಮತ್ತು ಹೆಸರು ಬೇಳೆಯನ್ನು ತೆಗೆದುಕೊಂಡು ಮಿಕ್ಸರ್‌ನಲ್ಲಿ ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಿ. ಎರಡೂ ಬೇಳೆಗಳು ಚೆನ್ನಾಗಿ ಮಿಶ್ರಣವಾಗಿ ಮಿಕ್ಸಿ ಆಗಬೇಕು. ನಂತರ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ತಯಾರಿಸಿಕೊಂಡ  ಬೇಳೆ ಬ್ಯಾಟರ್ ಹಾಕಿ. ಈಗ ಅದಕ್ಕೆ ಇಂಗು, ಕೆಂಪು ಮೆಣಸಿನ ಪುಡಿ, ಕಪ್ಪು ಉಪ್ಪು, ಜೀರಿಗೆ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣ ಆಗುವಂತೆ ನೋಡಿಕೊಳ್ಳಿ.

ನಂತರ ಒಂದು ಪ್ಯಾನ್ ನಲ್ಲಿ ಸ್ವಲ್ಪ ಸಂಸ್ಕರಿಸಿದ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ. ಈಗ ತಯಾರಿಸಿಕೊಂಡಿರುವ ಬೇಳೆ ಬ್ಯಾಟರ್ ನಿಂದ ಸಣ್ಣ ಉಂಡೆಗಳನ್ನು ಮಾಡಿ ಬಿಸಿ ಎಣ್ಣೆಯಲ್ಲಿ ಹಾಕಿ. ದಾಲ್ ಉಂಡೆಗಳು ಶಾಟ್ ಗ್ಲಾಸ್ ಗಳಲ್ಲಿ ಹಾಕುವಷ್ಟು ಚಿಕ್ಕದಾಗಿ ಮಾಡಿಕೊಂಡರೆ ಉತ್ತಮ. ಈಗ ಈ ಉಂಡೆಗಳನ್ನ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.

ಅವುಗಳನ್ನು ಹೊರತೆಗೆದು, ಬೆಚ್ಚಗಿನ ನೀರು ತುಂಬಿದ ಬಟ್ಟಲಿನಲ್ಲಿ ವಡೆಗಳನ್ನು ಮೃದು ಮತ್ತು ಕೋಮಲವಾಗುವವರೆಗೆ ನೆನೆಸಿಡಿ. ಈಗ ನೆನೆಸಿದ ಹುಣಸೆಹಣ್ಣನ್ನು ತೆಗೆದುಕೊಂಡು ಅದರ ತಿರುಳಿನಿಂದ ಸೋಸಿ ಹುಳಿ ತೆಗೆದುಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ತೆಗೆದುಕೊಂಡು ಜೀರಿಗೆ ಸೇರಿಸಿ. ಅವು ಸಿಡಿಯಲು ಪ್ರಾರಂಭವಾಗುವವರೆಗೆ ಕಾಯಿರಿ ಇದಕ್ಕೆ ಇಂಗು, ಶುಂಠಿ ಪುಡಿ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸೋಸಿದ ಹುಣಸೆಹಣ್ಣಿನ ಹುಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 2 ರಿಂದ 3 ನಿಮಿಷ ಬೇಯಿಸಿ ಕುದಿಸಿ. ಬೆಲ್ಲ ಸೇರಿಸಿ ಕರಗುವವರೆಗೆ ಕಾಯಿರಿ.

ಕೊತ್ತಂಬರಿ ಸೊಪ್ಪು ಚಟ್ನಿ ಮಾಡಲು, ಮೊದಲು ಕೊತ್ತಂಬರಿ ಸೊಪ್ಪು, ಒಣ ಮಾವಿನ ಪುಡಿ, ಕತ್ತರಿಸಿದ ಬೆಳ್ಳುಳ್ಳಿ, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.

ಈಗ ಒಂದು ಮಧ್ಯಮ ಗಾತ್ರದ ಬಟ್ಟಲಿನಲ್ಲಿ, ಮೊಸರನ್ನು ತೆಗೆದುಕೊಂಡು ಅದಕ್ಕೆ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಸಕ್ಕರೆ ಮತ್ತು ಕಪ್ಪು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಕೊನೆಯದಾಗಿ ಶಾಟ್ ಗ್ಲಾಸ್ ತೆಗೆದುಕೊಂಡು, ಅದರಲ್ಲಿ ನೆನೆಸಿದ ವಡೆಗಳನ್ನು ಹಾಕಿ. ಈಗ ಗ್ಲಾಸ್‌ಗೆ ದಹಿ ಮಿಶ್ರಣ ಹಾಕಿ. ಅದರ ಮೇಲೆ ಹುಣಸೆಹಣ್ಣು ಮತ್ತು ಕೊತ್ತಂಬರಿ ಚಟ್ನಿ ಹಾಕಿ. ಕತ್ತರಿಸಿದ ಶುಂಠಿ, ಜೀರಿಗೆ ಪುಡಿ ಮತ್ತು ದಾಳಿಂಬೆ ಬೀಜಗಳಿಂದ ಅಲಂಕರಿಸಿದರೆ ದಹಿ ವಡಾ ಶಾಟ್ಸ್‌ ಸವಿಯಲು ಸಿದ್ದ.

ಇದನ್ನೂ ಓದಿ: ಕಪ್ಪು ದ್ರಾಕ್ಷಿಯಲ್ಲಿದೆ ಅದ್ಭುತ ಪೋಷಕಾಂಶ, ಈ ಪ್ರಯೋಜನಗಳು ಸಿಗುತ್ತೆ

Leave a Reply

Your email address will not be published. Required fields are marked *