ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರನ್ನ ನಿಂದಿಸಿ, ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು (Rajeev Gowda) ಕೊನೆಗೂ ಪೊಲೀಸರು ಬಂಧನ ಮಾಡಿದ್ದಾರೆ.
ಕೇರಳ ಗಡಿಯಲ್ಲಿ ಬಂಧನ
ಮಾಹಿತಿಗಳ ಪ್ರಕಾರ, ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡನನ್ನು ಬಂಧನ ಮಾಡಲಾಗಿದೆ. ಕಳೆದ ಒಂದು ವಾರದಿಂದ ರಾಜೀವ್ ಗೌಡ ಅವರ ಬಂಧನ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಪ್ರಯತ್ನ ಮಾಡುತ್ತಿದ್ದರು. ಯಾವಾಗ ರಾಜೀವ್ ಗೌಡ ಅವರ ಆಡಿಯೋ ವೈರಲ್ ಆಗಿ, ಜನ ಆಕ್ರೋಶ ವ್ಯಕ್ತಪಡಿಸಲು ಆರಂಭ ಮಾಡಿದರೋ ಆಗ ಅವರ ಬಂಧನಕ್ಕೆ ಒತ್ತಾಯ ಸಹ ಹೆಚ್ಚಾಗಿದೆ. ತನ್ನ ಬಂಧನ ನಿಶ್ಚಿತ ಎಂಬುದನ್ನ ಅರ್ಥ ಮಾಡಿಕೊಂಡ ರಾಜೀವ್ ಗೌಡ ಮಂಗಳೂರಿಗೆ ಹೋಗಿ ಸ್ನೇಹಿತರ ಬಳಿ ಆಶ್ರಯ ಪಡೆದುಕೊಂಡಿದ್ದರು.
ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದ ರಾಜೀವ್ ಗೌಡ
ಇನ್ನು ಪ್ರಕರಣದ ಕಅವು ಏರುತ್ತಿದ್ದಂತೆ ತಪ್ಪಿಸಿಕೊಳ್ಲಲು ರಾಜೀವ್ ಗೌಡ ಅನೇಕ ಪ್ರಯತ್ನಗಳನ್ನ ಮಾಡಿದ್ದು, ಚಿಂತಾಮಣಿ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಜೊತೆಗೆ ಹೈಕೋರ್ಟ್ ನಲ್ಲಿ ತನ್ನ ವಿರುದ್ಧದ ಎಫ್ಐಆರ್ ರದ್ದು ಮಾಡಬೇಕು ಹಾಗೂ ಬಂಧನದಿಂದ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ಸಹ ರಾಜೀವ್ ಗೌಡ ಸಲ್ಲಿಕೆ ಮಾಡಿದ್ದ ಅರ್ಜಿಯನ್ನ ವಜಾ ಮಾಡಿತ್ತು.
ಇದನ್ನೂ ಓದಿ: ಅಪೆಕ್ಸ್ ಬ್ಯಾಂಕ್ ಚುನಾವಣಾ ಅಖಾಡಕ್ಕೆ ಸಿಎಂ ಎಂಟ್ರಿ, ರಾಜಣ್ಣ ಪರ ಬ್ಯಾಟ್ ಬೀಸ್ತಾರಾ ಸಿದ್ದರಾಮಯ್ಯ?
