ಮುಂಬೈ: ಕಳೆದ ಕೆಲ ವರ್ಷದಲ್ಲಿ ಭಾರತದ ಕ್ರಿಕೆಟಿಗರ ವೈಯಕ್ತಿಕ ಜೀವನ ಬಹಳ ಸುದ್ದಿಯಲ್ಲಿದೆ. ಹಾರ್ದಿಕ್ ಪಾಂಡ್ಯ ವಿಚ್ಛೇಧನದ ನಂತರ ಹೆಚ್ಚು ಸುದ್ದಿಯಲ್ಲಿದ್ದ ವ್ಯಕ್ತಿ ಎಂದರೆ ಅದು ಯುಜ್ವೇಂದ್ರ ಚಾಹಲ್. ಕಳೆದ ವರ್ಷ ನಟಿ ಧನಶ್ರೀ ವರ್ಮಾ ಜೊತೆ ಡಿವೋರ್ಸ್ ಪಡೆದುಕೊಂಡಿರುವ ಚಾಹಲ್ (Chahal) ಮಾಜಿ ಪತ್ನಿ ಜೊತೆ ಮತ್ತೆ ಒಂದಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
10 ತಿಂಗಳ ನಂತರ ಒಂದಾಗುತ್ತಾರಾ ಜೋಡಿ?
ಹೌದು, ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸುಮಾರು 10 ತಿಂಗಳ ನಂತರ ಈ ಜೋಡಿ ಒಂದಾಗುತ್ತಿದೆ. ಆದರೆ ಅದು ತೆರೆಯ ಮೇಲೆ ಎನ್ನಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಯುಜ್ವೇಂದ್ರ ಮತ್ತು ಧನಶ್ರೀ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರು. ಆದರೆ ಈಗ ಇಬ್ಬರೂ ಒಂದೇ ವೇದಿಕೆಯ ಮೇಲೆ ಸದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ಮಾಹಿತಿಗಳ ಪ್ರಕಾರ, ಹಿಂದಿಯಲ್ಲಿ ಶುರುವಾಗುತ್ತಿರುವ “ದಿ ಫಿಫ್ಟ್” ಎನ್ನುವ ರಿಯಾಲಿಟಿ ಶೋನಲ್ಲಿ ಇಬ್ಬರು ಕಾಣಿಸಿಕೊಳ್ಳಬಹುದು. ಆದರೆ ಈ ವಿಚಾರವಾಗಿ ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇನ್ನು ಈ “ದಿ ಫಿಫ್ಟಿ” ರಿಯಾಲಿಟಿ ಶೋ ಫ್ರೆಂಚ್ನಲ್ಲಿ ಜನಪ್ರಿಯ ಕಾರ್ಯಕ್ರಮವಾಗಿರುವ ಲೆಸ್ ಸಿಂಕ್ವಾಂಟೆಯ ಎನ್ನುವ ಕಾರ್ಯಕ್ರಮದ ಭಾರತೀಯ ಆವೃತ್ತಿಯಾಗಿದ್ದು, ಈಗಾಗಲೇ ಈ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಇನ್ನು ಮೂಲಗಳ ಪ್ರಕಾರ, “ದಿ ಫಿಫ್ಟಿ” ಕಾರ್ಯಕ್ರಮವು ಬಿಗ್ಬಾಸ್ ರೀತಿಯ ಥಿಮ್ ಹೊಂದಿದೆ. ಆದರೆ ಇಲ್ಲಿ ಒಂದು ನಿರ್ದಿಷ್ಠ ನಿಯಮವಿಲ್ಲ. ಆದರೆ ನೋಡುವ ಜನರಿಗೆ ಬಹಳ ಸಖತ್ ಮಜಾ ಕೊಡಲಿದೆ ಎನ್ನಲಾಗುತ್ತಿದೆ. ಇನ್ನು ಈ ಕಾರ್ಯಕ್ರಮ ಜಿಯೋಹಾಟ್ಸ್ಟಾರ್ ಮತ್ತು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತದೆ.
