Shocking News diesel smuggling gang found in belagavi

Shocking News: ರಾಜ್ಯದಲ್ಲಿ ಡೀಸೆಲ್‌ ಸ್ಮಗ್ಲಿಂಗ್‌ ದಂಧೆ, ಪೊಲೀಸರ ದಾಳಿಯಲ್ಲಿ ಬಯಲಾಯ್ತು ಶಾಕಿಂಗ್‌ ಸಮಾಚಾರ

ಬೆಳಗಾವಿ: ನಾವು ಬಂಗಾರ ಕಳ್ಳಸಾಗಣಿಕೆಯ ಬಗ್ಗೆ ಕೇಳಿರುತ್ತೇವೆ. ಇತ್ತೀಚೆಗಷ್ಟೇ ನಟಿ ರನ್ಯಾ ರಾವ್‌ ಪ್ರಕರಣ ಇದಕ್ಕೆ ಬಹಳ ಉತ್ತಮವಾದ ಉದಾಹರಣೆ. ಹೀಗಿರುವಾಗ ರಾಜ್ಯದಲ್ಲಿ ಡಿಸೇಲ್‌ ಸ್ಮಗ್ಲಿಂಗ್‌ ಆಗುತ್ತಿರುವ ಆಘಾತಕಾರಿ (Shocking News) ವಿಚಾರ ಬೆಳಕಿಗೆ ಬಂದಿದೆ. ಗಲ್ಫ್ ದೇಶದಿಂದ ಡಿಸೇಲ್ ಸ್ಮಗ್ಲಿಂಗ್ ಚಿನ್ನದ ಹಾಗೆಯೇ ಗಲ್ಫ್ ಕಂಟ್ರಿಗಳಿಂದ ರಾಜ್ಯಕ್ಕೆ ಡಿಸೇಲ್ ಸ್ಮಗ್ಲಿಂಗ್ ಆಗುತ್ತಿದ್ದು, ಅಕ್ರಮವಾಗಿ ಖದೀಮರು ತೈಲ ಉತ್ಪನ್ನಗಳ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಇದೀಗ ಬಯಲಾಗಿದ್ದು, ಕೇಂದ್ರ, ರಾಜ್ಯ ‌ಸರ್ಕಾರಕ್ಕೆ ತೈಲದಿಂದ ಬರುವ ಕೋಟಿ ಕೋಟಿ…

Read More
Prahlad Joshi about using ballet paper to GBA election

Prahlad Joshi: ಜಿಬಿಎ ಚುನಾವಣೆಗೆ ಬ್ಯಾಲೆಟ್‌ ಬಳಕೆ, ಸರ್ಕಾರದ ನಿರ್ಧಾರಕ್ಕೆ ಪ್ರಹ್ಲಾದ್ ಜೋಶಿ ವಿರೋಧ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬ್ಯಾಲೆಟ್ ಬಳಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಟ್ವೀಟ್‌ ಮಾಡಿದ್ದಾರೆ. ದುರಂತದ ವಿಷಯ ಎಂದ ಜೋಶಿ ತಮ್ಮ ಟ್ವೀಟ್‌ನಲ್ಲಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತ ಪತ್ರಗಳನ್ನು ಬಳಸಿ ನಡೆಸಲು ನಿರ್ಧರಿಸಿರುವುದು ನಿಜಕ್ಕೂ ದುರಂತದ ವಿಷಯ ಎಂದು ಹೇಳಿದ್ದಾರೆ. ಅಲ್ಲದೇ, ದಶಕಗಳ ಪ್ರಗತಿಯನ್ನು ಹಳ್ಳಗೆಡಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌…

Read More
DK Suresh talks about dk shivakumar and congress

DK Suresh: ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ: ಡಿಕೆ ಸುರೇಶ್

ಬೆಂಗಳೂರು: ನಮ್ಮ ಕಾಂಗ್ರೆಸ್‌ ಪಕ್ಷ ಆಲ್‌ರೆಡಿ ತಾಳ್ಮೆಯಿಂದ ಇರಿ ಅಂತ ಹೇಳಿದೆ ಎಂದು ಮಾಜಿ ಕಾಂಗ್ರೆಸ್‌ ಸಂಸದ ಡಿಕೆ ಸುರೇಶ್‌ (DK Suresh) ಹೇಳಿದ್ದಾರೆ. ಡಿಕೆ ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್‌ ಅವರು, ರಾಹುಲ್ ಗಾಂಧಿ ಕೂಡ ಮೈಸೂರಿನಲ್ಲಿ ಭೇಟಿಯಾದಾಗ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ.  ಪಕ್ಷದ ಹಿತ ದೃಷ್ಟಿಯಿಂದ ಶಾಸಕರ ಹಿತ ದೃಷ್ಟಿಯಿಂದ ತಾಳ್ಮೆಯಿಂದ‌ ಇದ್ದಾರೆ…

Read More
some rowdies threaten raichuru jds mla

Raichuru: ಅಕ್ರಮ ಮರಳು ದಂಧೆಗೆ ಕಡಿವಾಣ, ಶಾಸಕಿ ಮನೆಗೆ ನುಗ್ಗಿ ಬೆದರಿಕೆ ಹಾಕಿದ ಗೂಂಡಾಗಳು

ರಾಯಚೂರು: ರಾಯಚೂರಿನ (Raichuru) ಕೃಷ್ಣಾ ನದಿ ತೀರದಲ್ಲಿ ಅಕ್ರಮ‌ ಮರಳು ದಂಧೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತಿರೊ ಶಾಸಕಿ ಕರೆಮ್ಮಾ ನಾಯಕ್ ಅವರಿಗೆ ದಂಧೆಕೋರು ಬೆದರಿಕೆ ಹಾಕಿದ್ದಾರೆ. ಶಾಸಕರ ಮನೆಗೆ ನುಗ್ಗಿ ಬೆದರಿಕೆ ಮಾಹಿತಿಗಳ ಪ್ರಕಾರ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ದಂಧೆಕೋರರು ಶಾಸಕರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ರಾಯಚೂರಿನ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಅವರು ಅಕ್ರಮ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ…

Read More
dgp rao Viral Video case snehamayi krishna appeal for cc camera in all government office

Viral Video: ಡಿಜಿಪಿ ಪ್ರಕರಣ, ಸರ್ಕಾರಿ ಕಚೇರಿಗೆ ಸಿಸಿಟಿವಿ ಹಾಕುವಂತೆ ಸ್ನೇಹಮಯಿ ಕೃಷ್ಣ ಮನವಿ

ಬೆಂಗಳೂರು: ಮಹಿಳಾ ಸಿಬ್ಬಂದಿ ಜೊತೆ DGP ರಾಮಚಂದ್ರ ರಾವ್‌ (Viral Video) ರಾಸಲೀಲೆ ಪ್ರಕರಣ ಹಿನ್ನೆಲೆ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಕಡ್ಡಾಯ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ. ಪತ್ರ ಬರೆದ ಸ್ನೇಹಮಯಿ ಕೃಷ್ಣ ಈ ವಿಚಾರವಾಗಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸ್ನೇಹಮಯಿ ಕೃಷ್ಣ ಅವರು ಪತ್ರ ಬರೆದಿದ್ದು, ಎಲ್ಲಾ ಸರ್ಕಾರಿ ಕಚೇರಿಗಳು, ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಮನವಿ ಮಾಡಿದ್ದಾರೆ. ಮಹಿಳೆಯರ…

Read More
Big News slipper will be provided to school students rather than shoe

Big News: ಶೂ ಬದಲು ಮಕ್ಕಳಿಗೆ ಚಪ್ಪಲಿ ಭಾಗ್ಯ, ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ

ಬೆಂಗಳೂರು: ಹವಾಮಾನ ಬದಲಾವಣೆಯ ಕಾರಣದಿಂದ ಈ ಬಾರಿ ವಿದ್ಯಾರ್ಥಿಗಳಿಗೆ ಶೂ ಬದಲಾಗಿ ಚಪ್ಪಲಿ (Big News) ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಬೇಡಿಕೆ ಇರುವ ಜಿಲ್ಲೆಗಳ ಮಾಹಿತಿ ಸಂಗ್ರಹ ವಿದ್ಯಾರ್ಥಿಗಳಿಗೆ ಈ ಬಾರಿ ಶೂ ಬದಲು ಚಪ್ಪಲಿ ಭಾಗ್ಯ ನೀಡಲು ಇಲಾಖೆ ಪ್ಲ್ಯಾನ್‌ ಮಾಡುತ್ತಿದ್ದು, ಬೇಡಿಕೆ ಇರುವ ಜಿಲ್ಲೆ ಮಾಹಿತಿ ಸಂಗ್ರಹಕ್ಕೆ ಉರ್ದು & ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆ ನಿರ್ದೇಶನಾಲಯ ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ಹವಾಮಾನ ಅನುಗುಣವಾಗಿ ಚಪ್ಪಲಿ ಈ ಬಾರಿ ಮಕ್ಕಳಿಗೆ…

Read More
dgp ramachandra rao Video Viral Case officer reaction

Video Viral Case: 10 ದಿನ ರಜೆ ಹಾಕಿ ರಹಸ್ಯ ಸ್ಥಳಕ್ಕೆ ತೆರಳಿದ ರಾಮಚಂದ್ರರಾವ್

ಬೆಂಗಳೂರು: ರಾಸಲೀಲೆ ವೀಡಿಯೋ ವೈರಲ್ (Video Viral Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಜಿಪಿ ರಾಮಚಂದ್ರ ರಾವ್‌ ಅವರು ಕಾನೂನು ಹೋರಾಟದ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. ರಹಸ್ಯ ಸ್ಥಳದಲ್ಲಿ ಡಿಜಿಪಿ ಸದ್ಯದ ಮಾಹಿತಿಗಳ ಪ್ರಕಾರ,  ರಾಮಚಂದ್ರ ರಾವ್‌ ಅವರು ರಹಸ್ಯ ಸ್ಥಳದಲ್ಲಿ ಕಾನೂನಾತ್ಮಕ‌ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದು, ತಮ್ಮ ವಕೀಲರ ತಂಡದ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ದೂರು ಕೊಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಜ್ಞಾತ ಸ್ಥಳಕ್ಕೆ ತೆರಳಿದ ರಾವ್‌ ಇನ್ನು…

Read More