BY Vijayendra: ಭ್ರಷ್ಟಾಚಾರದ ಹೆಗ್ಗುರುತಾಗಿ ರಾಜ್ಯ ಸರ್ಕಾರ ಖ್ಯಾತಿ ಪಡೆದಿದೆ: ಬಿವೈ ವಿಜಯೇಂದ್ರ

BY Vijayendra slams congress government regarding developments

ಬೆಂಗಳೂರು: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ಸಾವಿರ ದಿನ ಪೂರೈಸಿರುವ ಕಾಂಗ್ರೆಸ್ ಸರ್ಕಾರದ ಸಂಭ್ರಮಾಚರಣೆ ಅರ್ಥಹೀನ. ಅಭಿವೃದ್ಧಿ ಶೂನ್ಯ ಹಾಗೂ ಭ್ರಷ್ಟಾಚಾರದ ಹೆಗ್ಗುರುತಾಗಿ ರಾಜ್ಯ ಸರ್ಕಾರ ಖ್ಯಾತಿ ಪಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚುವ ಪ್ರಯತ್ನ

ಬೆಂಗಳೂರಿನ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದತ್ತ ಅನಗತ್ಯವಾಗಿ ಆರೋಪಿಸುವ ಚಾಳಿ ಬೆಳೆಸಿಕೊಂಡಿದೆ. ರೈತರು, ಮಹಿಳೆಯರು ಹಾಗೂ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ಧೋರಣೆ ಖಂಡನೀಯ ಎಂದು ಕಿಡಿಕಾರಿದ್ದಾರೆ.  

ಅಬಕಾರಿ ಇಲಾಖೆ ಪ್ರಕರಣ ತನಿಖೆ ಆಗಬೇಕು

 ಅಬಕಾರಿ ಇಲಾಖೆ ಭ್ರಷ್ಟಾಚಾರ ಸೇರಿದಂತೆ ಹಲವು ಹಗರಣಗಳ ಕುರಿತು ತನಿಖೆಯಾಗಬೇಕು. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೇಂದ್ರ ಸರ್ಕಾರ ನೀಡಿರುವ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಸಂಬಂಧಿತ ಯೋಜನೆಗಳಿಗೆ ಬಳಸದೆ, ತನ್ನ ಇಚ್ಛಾನುಸಾರ ಬಳಸಿಕೊಂಡಿರುವುದು ಅಕ್ಷಮ್ಯ ಎಂದು ದೂರಿದರು.

ಇದನ್ನೂ ಓದಿ: ಕೊರಗ ಸಮುದಾಯದವರಿಗೆ ಮನೆ ಹಸ್ತಾಂತರ, ನಟ ರಿಷಬ್‌ ಭಾಗಿ

Leave a Reply

Your email address will not be published. Required fields are marked *