ಬಾಂಬೆ ಹೈಕೋರ್ಟ್ (Bombay High Court Recruitment 2025) ಖಾಲಿ ಇರುವ ಕ್ಲರ್ಕ್, ಪಿಯೋನ್, ಸ್ಟೆನೋಗ್ರಾಫರ್ ಮತ್ತು ಚಾಲಕ ಸೇರಿದಂತೆ 2381 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು– 2381ಹುದ್ದೆಗಳು
ಕ್ಲರ್ಕ್: 1382
ವಿದ್ಯಾರ್ಹತೆ: ಪದವಿ ಹಾಗೂ 40 WPM ಟೈಪಿಂಗ್
ವಯೋಮಿತಿ: 18 ರಿಂದ 38 ವರ್ಷ
ಪಿಯೋನ್ – 887 ಹುದ್ದೆಗಳು
ವಿದ್ಯಾರ್ಹತೆ: ಮರಾಠಿ ಓದಲು ಮತ್ತು ಬರೆಯಲು ತಿಳಿದಿರಬೇಕು
ಚಾಲಕರು – 37
ಅರ್ಹತೆ: 10ನೇ ತರಗತಿ ಉತ್ತೀರ್ಣ, LMV ಪರವಾನಗಿ ಮತ್ತು 3 ವರ್ಷದ ಅನುಭವ
ಸ್ಟೆನೋಗ್ರಾಫರ್ – 56 ಹುದ್ದೆ
ವಿದ್ಯಾರ್ಹತೆ: ಪದವಿ, ಶಾರ್ಟ್ಹ್ಯಾಂಡ್ 80 WPM, ಟೈಪಿಂಗ್ 40 WPM
ಸ್ಟೆನೋಗ್ರಾಫರ್ (ಹೈಯರ್) – 19 ಹುದ್ದೆಗಳು
ವಿದ್ಯಾರ್ಹತೆ: ಪದವಿ, ಶಾರ್ಟ್ಹ್ಯಾಂಡ್ 100 WPM, ಟೈಪಿಂಗ್ 40 WPM
ಅರ್ಜಿ ಸಲ್ಲಿಸುವ ದಿನಾಂಕ:
ಡಿಸೆಂಬರ್ 15, 2025ರಿಂದ ಜನವರಿ 5, 2026ರ ವರೆಗೆ
ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಶುಲ್ಕ
ಅಭ್ಯರ್ಥಿಗಳು ಬಾಂಬೆ ಹೈಕೋರ್ಟ್ ಅಧಿಕೃತ ವೆಬ್ಸೈಟ್ bombayhighcourt.nic.in ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಎಲ್ಲಾ ವರ್ಗಗಳಿಗೆ ₹1000. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಭರ್ತಿ ಮಾಡಿ ನಂತರ ಶುಲ್ಕ ಪಾವತಿಸಬೇಕು.
ಇದನ್ನೂ ಓದಿ: 2 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇದೊಂದು ಡಿಗ್ರಿ ಆಗಿದ್ರೆ ಸಾಕು ಅಪ್ಲೈ ಮಾಡಬಹುದು
