ನವದೆಹಲಿ: ಬಿಜೆಪಿಯ (BJP) ಮುಂದಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆದಿದ್ದು, ನಾಳೆ ಅಧ್ಯಕ್ಷರ ಹೆಸರನ್ನ ಬಹಿರಂಗಪಡಿಸಲಾಗುತ್ತದೆ ಎನ್ನಲಾಗಿದೆ.
ಅತಿಹೆಚ್ಚು ಬೆಂಬಲ ಪಡೆದ ನಿತಿನ್
ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ನಿತಿನ್ ನಬಿನ್ (46) ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿದೆ. ಇದರಿಂದಾಗಿ ಅವರು ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ಈ ನಾಮಪತ್ರಗಳ ಪೈಕಿ 36 ನಾಮಪತ್ರಗಳು ವಿವಿಧ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಲ್ಲಿಕೆಯಾಗಿದ್ದರೆ, ಒಂದು ನಾಮಪತ್ರವನ್ನು ಬಿಜೆಪಿ ರಾಷ್ಟ್ರೀಯ ಮಂಡಳಿ ಮತ್ತು ಸಂಸದೀಯ ಪಕ್ಷವು ಸಲ್ಲಿಸಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿರ್ಗಮಿತ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇತರ 20 ಹಿರಿಯ ಕೇಂದ್ರ ನಾಯಕರು ಪ್ರತಿಪಾದಕರಾಗಿದ್ದಾರೆ.
ಅಧ್ಯಕ್ಷರ ಹೆಸರನ್ನ ಘೋಷಣೆ ಮಾಡಲಿದ್ದಾರೆ ಮೋದಿ
ಬಿಜೆಪಿ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ನಾಳೆ ಹೊಸ ಅಧ್ಯಕ್ಷರ ಹೆಸರನ್ನ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುಮಾರು 700 ಪ್ರತಿನಿಧಿಗಳು ಸೇರುವ ನಿರೀಕ್ಷೆಯಿದೆ.
ಇನ್ನು ದೇಶಾದ್ಯಂತ ಒಟ್ಟು 10,70,462 ಬೂತ್‌ಗಳಲ್ಲಿ 7,88,197 ಬೂತ್ ಅಧ್ಯಕ್ಷರಿಗೆ ಚುನಾವಣೆ ಪೂರ್ಣಗೊಂಡಿದೆ. ಇದಲ್ಲದೆ, ಇಲ್ಲಿಯವರೆಗೆ 89,47,845 ಬೂತ್ ಸಮಿತಿ ಸದಸ್ಯರನ್ನು ರಚಿಸಲಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಮುಂದುವರೆದಿದೆ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
