Naseer Ahmed: ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ, ನಜೀರ್‌ ಅಹ್ಮದ್‌ ಅಮಾನತಿಗೆ ಬಿಜೆಪಿ ಒತ್ತಾಯ

BJP petitions for Naseer Ahmed suspension

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ (Naseer Ahmed) ಅವರನ್ನು ತಕ್ಷಣವೇ ಸದನದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ತಿನಲ್ಲಿ ಇಂದು ವಿಪಕ್ಷ ಬಿಜೆಪಿ ಧರಣಿ ನಡೆಸಿತು. 

ಸ್ಪಷ್ಟನೆ ನೀಡಿದ ಅಹ್ಮದ್‌

ನಸೀರ್ ಅಹ್ಮದ್ ಮಾತನಾಡಿ, ಪ್ರಧಾನಿ ಮೋದಿಯವರು ಇಲ್ಲ ಎಂದರೆ ದೇಶ ಇಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದ್ದರು. ಹೀಗಾಗಿ ನಾನು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾಗಿ ಸ್ಪಷ್ಟನೆ ನೀಡಿ, ತಾವು ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. 

ಕಲಾಪ ನಾಳೆಗೆ ಮುಂದೂಡಿಕೆ

ಈ ನಡುವೆ, ಸಿ.ಟಿ.ರವಿ ನಸೀರ್ ಅಹಮ್ಮದ್ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ, ಆಡಳಿತ ಪಕ್ಷದ ಸದಸ್ಯರು ಕ್ಷಮೆಯಾಚಿಸುವಂತೆ ಪಟ್ಟುಹಿಡಿದರು. ಇದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿ, ಸದನ ಗೊಂದಲದ ಗೂಡಾಯಿತು. ಈ ವೇಳೆ, ಸಭಾಪತಿ ಸ್ಥಾನದಲ್ಲಿದ್ದ ಪ್ರಾಣೇಶ್ ಸದನದ ಕಲಾಪವನ್ನು ನಾಳೆಗೆ ಮುಂದೂಡಿದರು.

ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗ್ರಹ

Leave a Reply

Your email address will not be published. Required fields are marked *