AWEIL Recruitment: ಬರೋಬ್ಬರಿ 14 ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 90 ಸಾವಿರ ಸಂಬಳ

AWEIL Recruitment 2026 Eligibility Details

ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL Recruitment) ಹಣಕಾಸು ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿದೆ.

ಸಂಸ್ಥೆಯ ಹೆಸರು: ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL)
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಕೋಲ್ಕತ್ತಾ , ಜಬಲ್ಪುರ , ಕೊರ್ವಾ, ಕಾನ್ಪುರ, ತಿರುಚಿರಾಪಳ್ಳಿ
ಹುದ್ದೆಯ ಹೆಸರು: ಹಣಕಾಸು  ಕಾರ್ಯನಿರ್ವಾಹಕ
ಸಂಬಳ: ತಿಂಗಳಿಗೆ ರೂ. 90,000/-

AWEIL ನೇಮಕಾತಿ 2026 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ CA / CMA, ICAI / ICMAI ಪೂರ್ಣಗೊಳಿಸಿರಬೇಕು .

ವಯೋಮಿತಿ:  ಗರಿಷ್ಠ ವಯಸ್ಸು 35 ವರ್ಷಗಳು.

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು

SC/ST ಅಭ್ಯರ್ಥಿಗಳು: 5 ವರ್ಷಗಳು

ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ?

ಆಫ್‌ಲೈನ್‌

ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ಅರ್ಜಿಯಲ್ಲಿ ಕೇಳಲಾಗಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್ (HR), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಎಕ್ವಿಪ್‌ಮೆಂಟ್ ಇಂಡಿಯಾ ಲಿಮಿಟೆಡ್, ಆರ್ಡನೆನ್ಸ್ ಫ್ಯಾಕ್ಟರಿ ಕಪ್ಲಿ ರಸ್ತೆ ಕಾನ್ಪುರ್ -208009 ಗೆ ಅರ್ಜಿಯನ್ನ ಕಳುಹಿಸಬೇಕು. ಹಾಗೆಯೇ, ಅರ್ಜಿಯ ಸಾಫ್ಟ್ ಕಾಪಿಯನ್ನು ಇಮೇಲ್ ಮೂಲಕ dir-hr@aweil.in ಕಳುಹಿಸಬೇಕು.

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-01-2026

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-2 -2026

ಅಧಿಕೃತ ವೆಬ್‌ಸೈಟ್: aweil.in

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಆಗಿದ್ರೆ ಸಾಕು ನಿಮಗೂ ಸರ್ಕಾರಿ ಕೆಲಸ ಸಿಗುತ್ತೆ

Leave a Reply

Your email address will not be published. Required fields are marked *